ADVERTISEMENT

₹20 ಕೋಟಿ ವೆಚ್ಚದ ಕಾಮಗಾರಿ ನಾಳೆ ಉದ್ಘಾಟನೆ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 14:20 IST
Last Updated 11 ಜುಲೈ 2024, 14:20 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ತೀರ್ಥಹಳ್ಳಿ: ‘ನನ್ನ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಲಾಗಿದ್ದ ಗೃಹ ಇಲಾಖೆಯ ಒಟ್ಟು ₹20.50 ಕೋಟಿ ವೆಚ್ಚದ ಕಟ್ಟಡ ಹಾಗೂ ಸಮುಚ್ಛಯಗಳನ್ನು  ಜೂನ್‌ 13ರಂದು ಗೃಹಸಚಿವ ಜಿ.ಪರಮೇಶ್ವರ ಉದ್ಘಾಟಿಸಲಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಲಾ ₹3 ಕೋಟಿ ವೆಚ್ಚದ ಪೊಲೀಸ್‌ ಠಾಣೆ ಕಟ್ಟಡ, ಅಗ್ನಿಶಾಮಕ ಠಾಣೆ, ಡಿವೈಎಸ್ಪಿ, 4 ಪಿಎಸ್‌ಐ ಮತ್ತು 48 ಪೊಲೀಸ್‌ ಸಿಬ್ಬಂದಿ ವಸತಿ ಸಮುಚ್ಛಯ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದಿನದ 48 ಗಂಟೆಗಳ ಕಾಲ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್‌ ಸಿಬ್ಬಂದಿಗೆ ಉತ್ತಮ ಕಟ್ಟಡ ಸೌಲಭ್ಯ ಇರಲಿಲ್ಲ. ಸಿಬ್ಬಂದಿ ಕುಟುಂಬಗಳು ವಾಸಿಸಲು ವಸತಿ ವ್ಯವಸ್ಥೆ ಸುಸ್ಥಿತಿಯಲ್ಲಿ ಇರಲಿಲ್ಲ. ನಾನು ಗೃಹಸಚಿವನಾಗಿದ್ದಾಗ ಹೆಚ್ಚಿನ ಅನುದಾನ ಕಲ್ಪಿಸಿದ್ದೆ’ ಎಂದು ಅವರು ಹೇಳಿದರು. 

ADVERTISEMENT

‘ಆಗುಂಬೆಯ ಬ್ರಿಟಿಷರ ಕಾಲದ ಹಳೆಯ ಪೊಲೀಸ್ ಠಾಣೆ ಕುಸಿದು ಬಿದ್ದಿದೆ. ಕಟ್ಟಡದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ನಾಟಾ ಮತ್ತು ಕಲ್ಲುಗಳಿವೆ. ಈ ಬಗ್ಗೆ ಜಿಲ್ಲಾ ರಕ್ಷಾಣಾಧಿಕಾರಿ ಗಮನಕ್ಕೂ ತರಲಾಗಿದೆ. ಕಟ್ಟಡ ತೆರವುಗೊಳಿಸಿ ಅದನ್ನು ಪ್ರವಾಸಿ ಕೇಂದ್ರವನ್ನಾಗಿ ಹಾಗೂ ಆ ಜಾಗದಲ್ಲಿ ಸುಂದರವಾದ ಉದ್ಯಾನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಹಶೀಲ್ದಾರ್ ಬಿ.ಜಿ. ಜಕ್ಕನಗೌಡರ್, ತಾ.ಪಂ. ಇಒ ಎಂ.ಶೈಲಾ, ಡಿವೈಎಸ್ಪಿ ಗಜಾನನ ವಾಮನ ಸುತಾರ್‌, ಸಿಪಿಐ ಶ್ರೀಧರ್ ಅಶ್ವತ್ಥಗೌಡ, ಅಗ್ನಿಶಾಮಕದಳದ ಅಧಿಕಾರಿ ಮಹಾಲಿಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.