ADVERTISEMENT

ಪ್ರವಾಸಿಗರ ಕೈಬೀಸಿ ಕರೆಯುತ್ತಿರುವ ಮಾವಿನಗುಂಡಿ ಜಲಪಾತ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 15:20 IST
Last Updated 1 ಜುಲೈ 2024, 15:20 IST
ಕಾರ್ಗಲ್ ಸಮೀಪದ ಮಾವಿನ ಗುಂಡಿ ಜಲಪಾತದ ರಮ್ಯ ನೋಟ
ಕಾರ್ಗಲ್ ಸಮೀಪದ ಮಾವಿನ ಗುಂಡಿ ಜಲಪಾತದ ರಮ್ಯ ನೋಟ   

ಕಾರ್ಗಲ್: ಸಮೀಪದ ಮಾವಿನ ಗುಂಡಿ ಜಲಪಾತ ಮಳೆಗೆ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಹಾಲ್ನೊರೆಯಂತೆ ಹರಿದು ಬರುವ ನೀರು ಕಣಿವೆಯ ಆಳದಲ್ಲಿ ಶರಾವತಿ ನದಿಯೊಂದಿಗೆ ಲೀನವಾಗುತ್ತದೆ. 

ವಿನ ಗುಂಡಿ ಜಲಪಾತವನ್ನು ‘ಕೆಪ್ಪೆ ಜೋಗ’ ಎಂದೂ ಕರೆಯುತ್ತಾರೆ. ಜೋಗಕ್ಕೆ ಬರುವ ಪ್ರವಾಸಿಗರನ್ನು ಇದು ಸೆಳೆಯುತ್ತದೆ.

ADVERTISEMENT

‘ಮಳೆಗಾಲ ಮುಗಿಯುವವರೆಗೂ ಈ ಜಲಪಾತ ತನ್ನ ವೈಭವ ತೋರಿಸುತ್ತದೆ’ ಎಂದು ಇಲ್ಲಿನ ಪ್ರವಾಸಿ ಮಾರ್ಗದರ್ಶಿ ನಾಗರಾಜ್ ಕಾರ್ಗಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.