ADVERTISEMENT

ಸಿಗದ ಮೊಬೈಲ್ ನೆಟ್‌ವರ್ಕ್: ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 5:22 IST
Last Updated 13 ಜುಲೈ 2021, 5:22 IST
ಸಾಗರ ತಾಲ್ಲೂಕಿನ ಕುದರೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಕಾರಣಿ ಗ್ರಾಮದ ಒಂದು ನೋಟ.
ಸಾಗರ ತಾಲ್ಲೂಕಿನ ಕುದರೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಕಾರಣಿ ಗ್ರಾಮದ ಒಂದು ನೋಟ.   

ಸಾಗರ: ತಾಲ್ಲೂಕಿನ ಕುದರೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ ನೊಂದಿರುವ ಗ್ರಾಮಸ್ಥರು ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.

‘ನೋ ನೆಟ್‌ವರ್ಕ್, ನೋ ಓಟಿಂಗ್’ ಎನ್ನುವ ಘೋಷವಾಕ್ಯದ ಮೂಲಕ ಕರೂರು ಹೋಬಳಿಯ ಗ್ರಾಮಸ್ಥರು ಆಂದೋಲನಕ್ಕೆ ಮುಂದಾಗಿದ್ದಾರೆ. ಶರಾವತಿ ಹಿನ್ನೀರಿನ ಹಳ್ಳಿಗಳನ್ನೊಳಗೊಂಡು ಕುದರೂರು ಎಂಬ ನೂತನ ಜಿಲ್ಲಾ ಪಂಚಾಯಿತಿ ಕ್ಷೇತ್ರ ರಚನೆಯಾದ ಬೆನ್ನಲ್ಲೆ ಈ ಆಂದೋಲನಕ್ಕೆ ಗ್ರಾಮಸ್ಥರು ಸಿದ್ಧರಾಗಿದ್ದಾರೆ.

ವರ್ಷದ ಹಿಂದೆಯೇ ಕಟ್ಟಿನಕಾರು– ಕಾರಣಿ ನೆಟ್‌ವರ್ಕ್ ಹೋರಾಟ ಸಮಿತಿ ಸಾಮೂಹಿಕ ನಾಯಕತ್ವದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರು. ‘ಆರು ಸಾವಿರಕ್ಕೂ ಹೆಚ್ಚು ಜನ ವಸತಿ ಇರುವ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದೆ ಇರುವುದರಿಂದ ಹಲವು ರೀತಿಯ ಸೇವೆಗಳಿಂದ ಈ ಭಾಗದ ಜನರು ವಂಚಿತರಾಗುವಂತಾಗಿದೆ’ ಎನ್ನುತ್ತಾರೆ ಸಮಿತಿಯ ಪ್ರಮುಖರಾದ ರಾಜಕುಮಾರ್, ಉದಯ್, ಗೌತಮ್ ಹೆಗ್ಗಡೆ.

ADVERTISEMENT

ನಮ್ಮ ಗ್ರಾಮಗಳಿಗೆ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವಂತೆ ಕ್ಷೇತ್ರದ ಶಾಸಕ ಎಚ್.ಹಾಲಪ್ಪ ಹರತಾಳು ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಈ ವಿಷಯವನ್ನು ಹಾಲಪ್ಪ ಅವರು ವಿಧಾನಸಭೆಯ ಅಧಿವೇಶನದಲ್ಲಿಪ್ರಸ್ತಾಪಿಸಿದ್ದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಹೀಗಾಗಿ ಇಲ್ಲಿನಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.