ADVERTISEMENT

ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸಿ: ಎ.ಕೆ. ನಾಗೇಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 14:41 IST
Last Updated 11 ನವೆಂಬರ್ 2024, 14:41 IST
ಹೊಳೆಹೊನ್ನೂರಿನ ಪಿ.ಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಚೇತನ ಮಕ್ಕಳ ಮತ್ತು ಪೋಷಕರ ಸಭೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ ಉದ್ಘಾಟಿಸಿದರು.
ಹೊಳೆಹೊನ್ನೂರಿನ ಪಿ.ಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಚೇತನ ಮಕ್ಕಳ ಮತ್ತು ಪೋಷಕರ ಸಭೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ ಉದ್ಘಾಟಿಸಿದರು.   

ಹೊಳೆಹೊನ್ನೂರು: ‘ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಜ್ಞಾನವಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ತಿಳಿಸಿದರು.

ಪಟ್ಟಣದ ಪಿಯು ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಚೇತನ ಮಕ್ಕಳ ಮತ್ತು ಪೋಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯ ಎಂದ ಮೇಲೆ ಒಂದಲ್ಲ ರೀತಿಯ ನ್ಯೂನ್ಯತೆ ಇರುತ್ತದೆ. ಅದನೆಲ್ಲ ಛಲದಿಂದ ಮೆಟ್ಟಿನಿಂತಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿಶೇಷ ಚೇತನ ಮಕ್ಕಳಲ್ಲಿ ಪೋಷಕರು ಹಾಗೂ ಸಾರ್ವಜನಿಕರು ಆತ್ಮವಿಶ್ವಾಸ ತುಂಬಿದಾಗ ಮಾತ್ರ ಅವರನ್ನು ಸಮಾಜದಲ್ಲಿ ಉನ್ನತ ಸ್ಥಿತಿಗೆ ತರಲು ಸಾಧ್ಯ’ ಎಂದರು.

ADVERTISEMENT

ಭದ್ರಾವತಿಯ ವೈದ್ಯಾಧಿಕಾರಿ ಡಾ.ಅಶೋಕ, ‘ಪೋಷಕರು ಮಕ್ಕಳನ್ನು ಗರ್ಭಾವಸ್ಥೆಯಿಂದಲೇ ಎಚ್ಚರಿಕೆಯಿಂದ ಕಾಳಜಿ ವಹಿಸಬೇಕು. ಮಕ್ಕಳಲ್ಲಿನ ನ್ಯೂನ್ಯತೆಗಳಿಗೆ ಚಿಕಿತ್ಸೆಗಳಿದ್ದು, ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಿದರೆ ಅಂಗವಿಕಲತೆ ದೂರ ಮಾಡಬಹುದು’ ಎಂದರು.

ಶಿವಮೊಗ್ಗದ ಎಸ್ಎಸ್‌ಕೆ ಎ.ಪಿ.ಸಿ ಶ್ರೀಮತಿ, ಎಸ್ಎಸ್‌ಕೆ ಡಿವೈಪಿಸಿ ಜಯಲಕ್ಷ್ಮೀ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್. ಉಮೇಶ್, ಯುವ ಮುಖಂಡ ಎ.ಕೆ.ರಮೇಶ್, ಎನ್.ಪಿ.ಎಸ್. ರಂಗನಾಥ, ತಿಪ್ಪೇಶ್ ನಾಯಕ್, ಹನುಮಂತಪ್ಪ, ಮಂಜುನಾಥ, ಬಸವರಾಜ, ಆನಂದ, ರೇಣುಕಾ, ಪ್ರಭಾಕರ್ ಡಿ.ಸಿ, ಕುಮಾರ್, ರಂಗನಾಯಕಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.