ಭದ್ರಾವತಿ: ವಚನ ಸಾಹಿತ್ಯವು ಸಮಾಜದಲ್ಲಿನ ವಿವಿಧ ಸಮಸ್ಯೆಗಳಿಗೆ ಉತ್ತರವಾಗಿದೆ. ಬಸವಾದಿ ಎಲ್ಲ ಶಿವಶರಣರು ಸಕಲರಿಗೂ ಒಳ್ಳೆಯದನ್ನು ಬಯಸಿದರು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಂಚಾಲಕ ಬಸವನಗೌಡ ಮಾಳಗಿ ತಿಳಿಸಿದರು.
ನಗರದ ಹೊಸಮನೆಯ ಮನೆಯೊಂದರಲ್ಲಿ ಲಕ್ಕಮ್ಮ ಮತ್ತು ಮಂಜಪ್ಪ ವಿರೂಪಾಕ್ಷಪ್ಪ ಕುಟುಂಬದವರು ಹಮ್ಮಿಕೊಂಡಿದ್ದ 653ನೇ ವಚನ ಮಂಟಪದಲ್ಲಿ ಅವರು ಉಪನ್ಯಾಸ ನೀಡಿದರು.
ಬಸವಣ್ಣನವರು ಸಮಾಜದಲ್ಲಿ ನಡೆಯುತ್ತಿದ್ದ ತಪ್ಪುಗಳನ್ನು ತಿದ್ದುವ ಮೂಲಕ ಜನರು ಸರಿ ದಾರಿಯಲ್ಲಿ ನಡೆಯುವಂತೆ ದಾರಿ ತೋರಿದರು ಎಂದು ಸ್ಮರಿಸಿದರು.
ಎನ್.ಎಸ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾಂಬಾ, ವಿರೂಪಾಕ್ಷಪ್ಪ ಪಾಲ್ಗೊಂಡಿದ್ದರು. ಕದಳಿ ವೇದಿಕೆ ಸದಸ್ಯರು ವಚನ ಪ್ರಾರ್ಥನೆ ಮಾಡಿದರು. ಎಂ. ವಿರೂಪಾಕ್ಷಪ್ಪ ಸ್ವಾಗತಿಸಿದರು. ಎಚ್.ಎನ್. ಮಹಾರುದ್ರ ಆಶಯ ಭಾಷಣ ಮಾಡಿದರು. ಬಾರಂದೂರು ಪ್ರಕಾಶ್ ದಿಕ್ಸೂಚಿ ಭಾಷಣ ಮಾಡಿದರು. ಮಲ್ಲಿಕಾರ್ಜುನ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.