ADVERTISEMENT

ಆಡಳಿತಕ್ಕೆ ಸಂಘದ ನಿರ್ದೇಶಕರಿಂದಲೇ ಅಡ್ಡಗಾಲು: ಸುಜನಿ ಗಂಭೀರ ಆರೋಪ

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷೆ ಸುಜನಿ ಕೆ.ವಿ. ಗೌಡ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 13:10 IST
Last Updated 14 ಡಿಸೆಂಬರ್ 2023, 13:10 IST
ಸುಜನಿ ಕೆ.ವಿ. ಗೌಡ
ಸುಜನಿ ಕೆ.ವಿ. ಗೌಡ   

ತೀರ್ಥಹಳ್ಳಿ: ‘ತಾಲ್ಲೂಕು ಒಕ್ಕಲಿಗರ ಸಂಘದ ಬೆಳವಣಿಗೆಗೆ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಮಾಜಿ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್‌ ಅವರು ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ’ ಎಂದು ಅಧ್ಯಕ್ಷೆ ಸುಜನಿ ಕೆ.ವಿ. ಗೌಡ ದೂರಿದರು.

‘ಪ್ರಭಾಕರ್‌ ಅವರು ಅನಧಿಕೃತವಾಗಿ ಹೊಸ ಆಡಳಿತ ಮಂಡಳಿ ರಚಿಸಿದ್ದಾರೆ. ನಿಮ್ಮನ್ನು ಇಲ್ಲಿ ಕೂರಿಸಿದವವರು ಯಾರು ? ನಿಮಗೆ ಯೋಗ್ಯತೆ, ನಾಲಿಗೆ ಇದೆಯಾ ಎಂದು ನನ್ನನ್ನೇ ಪ್ರಶ್ನಿಸುತ್ತಾರೆ. ಅವರ ಇಂತಹ ಮಾತುಗಳು ಖಂಡನೀಯ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಚೇರಿಯ ಬೇಗ, ನಿರ್ಣಯ ಪುಸ್ತಕವನ್ನು ನಿರ್ದೇಶಕ ಸುಧೀರ್‌ ಅವರು ಅಕ್ರಮವಾಗಿ ತೆಗೆದುಕೊಂಡು ಹೋಗಿದ್ದಾರೆ. ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳ ಅನುಪಸ್ಥಿತಿಯಲ್ಲಿ ನಿಯಮಬಾಹಿರವಾಗಿ ಸಭೆ ನಡೆಸಿದ್ದಾರೆ. ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್‌ ಠಾಣೆ ಹಾಗೂ ತಹಶೀಲ್ದಾರ್‌ ಅವರಿಗೆ ದೂರು ಸಲ್ಲಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಕಾರ್ಯದರ್ಶಿ ಶಶಿಧರ್‌ ಮೇಲಿನಕೊಪ್ಪ, ನಿರ್ದೇಶಕರಾದ ಅಲ್ಮನೆ ಶೈಲಾ ಡಿ.ಎನ್‌., ಸುನೀಲ್‌ ಆಡಿನಸರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.