ADVERTISEMENT

ಲಿಂಗನಮಕ್ಕಿಯಲ್ಲಿ ನೀರು ಇಳಿಮುಖ: ವಿದ್ಯುತ್ ಉತ್ಪಾದನೆ ಕುಸಿಯುವ ಆತಂಕ

​ಪ್ರಜಾವಾಣಿ ವಾರ್ತೆ
Published 10 ಜೂನ್ 2023, 19:13 IST
Last Updated 10 ಜೂನ್ 2023, 19:13 IST
ಲಿಂಗನಮಕ್ಕಿ ಜಲಾಶಯ (ಸಂಗ್ರಹ ಚಿತ್ರ)
ಲಿಂಗನಮಕ್ಕಿ ಜಲಾಶಯ (ಸಂಗ್ರಹ ಚಿತ್ರ)   

ಕಾರ್ಗಲ್: ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಮಳೆಯಾಗದಿದ್ದರೆ ಜಲವಿದ್ಯುತ್ ಉತ್ಪಾದನೆ ಕುಸಿಯುವ ಆತಂಕ ಎದುರಾಗಿದೆ.

ಜಲಾಶಯದಲ್ಲಿ ಪ್ರಸ್ತುತ 1,744 ಅಡಿ ಮಟ್ಟಕ್ಕೆ ನೀರಿನ ಸಂಗ್ರಹ ಕುಸಿದಿದೆ. 156 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ ಕೇವಲ 14 ಟಿಎಂಸಿ ನೀರು ಇದೆ.  

ಪೆನ್ ಸ್ಟಾಕ್ ಪೈಪ್‌ಗಳ ಮೂಲಕ ಲಿಂಗನಮಕ್ಕಿ ಜಲವಿದ್ಯುತ್‌ಗಾರಕ್ಕೆ ನೀರು ಪೂರೈಕೆಯಾಗುತ್ತಿದೆ. 1742 ಅಡಿ ಮಟ್ಟದಲ್ಲಿ ಈ ಪೈಪ್‌ಗಳನ್ನು ಅಳವಡಿಸಲಾಗಿದೆ.  ಜಲಾಶಯದಲ್ಲಿ ಇನ್ನು 3 ಅಡಿ ನೀರು ಇಳಿಮುಖವಾದರೆ ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಎದುರಾಗಲಿದೆ ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.