ADVERTISEMENT

Womens Day: ಪ್ರೇಮಕ್ಕಳ ಮಾದರಿ ಬದುಕು..

ರವಿ ನಾಗರಕೊಡಿಗೆ
Published 8 ಮಾರ್ಚ್ 2024, 6:56 IST
Last Updated 8 ಮಾರ್ಚ್ 2024, 6:56 IST
ಪ್ರೇಮಕ್ಕ
ಪ್ರೇಮಕ್ಕ   

ಹೊಸನಗರ: ಬದುಕಿನಲ್ಲಿ ಎದುರಾದ ಕಷ್ಟ ಕಾರ್ಪಣ್ಯಗಳನ್ನು ಧೈರ್ಯದಿಂದ ಎದುರಿಸಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡವರು ತಾಲ್ಲೂಕಿನ ನಗರ ಸಮೀಪದ ಕೋಟೆ ಹಿಂದಿನಕೇರಿ ನಿವಾಸಿ ಪ್ರೇಮಕ್ಕ.

ಸಂತೆ, ಜಾತ್ರೆ, ಉತ್ಸವ ಮುಂತಾದೆಡೆ ಹಣ್ಣು, ಶರಬತ್ತು, ಮಂಡಕ್ಕಿ, ತಿಂಡಿ–ತಿನಿಸುಗಳನ್ನು ಮಾರಾಟ ಮಾಡುವುದು ಇವರ ಕಾಯಕ. ಪ್ರೇಮಕ್ಕನಿಗೆ ಈಗ 70ರ ಹರೆಯ. ಈ ಇಳಿ ವಯಸ್ಸಿನಲ್ಲೂ ವ್ಯಾಪಾರ ಮಾತ್ರ ಬಿಟ್ಟಿಲ್ಲ. ಕಡುಬಡತನವಿದ್ದರೂ ವ್ಯಾಪಾರದಿಂದ ಬಂದುದರಲ್ಲೇ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಪ್ರೇಮಕ್ಕ14 ವರ್ಷದವರಾಗಿದ್ದಾಗ ಅವರ ಮನೆ ಬೆಂಕಿಗೆ ಆಹುತಿಯಾಯಿತು. ಅದರೊಂದಿಗೆ ಅವರ ಬದುಕು ಬೀದಿಗೆ ಬಿದ್ದಿತು. ಇದರಿಂದ ಕಂಗೆಡದ ಅವರು ತಂದೆ ಕೃಷ್ಣಪ್ಪರಿಗೆ ಹೆಗಲುಕೊಟ್ಟು ಶ್ರಮಿಸಿದರು. ಇರುವ ಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡುತ್ತಾ ಸಂಸಾರಕ್ಕಾಗಿ ದುಡಿದರು. ಮದುವೆ ನಂತರದಲ್ಲೂ ವ್ಯಾಪಾರ ಮುಂದುವರಿಸಿಕೊಂಡು ಹೋಗುವ ಮೂಲಕ ಮಕ್ಕಳ ಬದುಕು ರೂಪಿಸಿದ್ದಾರೆ. ಪ್ರೇಮಕ್ಕೆ ಅವರ ಕಾಯಕಕ್ಕೆ ಮಗ ಆಸರೆಯಾಗಿದ್ದಾನೆ.

ADVERTISEMENT

ನಗರದ ಸುತ್ತಮುತ್ತ ಎಲ್ಲಿಯೇ ಕಾರ್ಯಕ್ರಮಗಳಾದರೂ ಅಲ್ಲಿ ಪ್ರೇಮಕ್ಕ ತಯಾರಿಸುವ ಪಾನಕ ಸಿಗುವುದು ಕಾಯಂ.

‘ವ್ಯಾಪಾರಕ್ಕೆ ಹೋಗುವುದು ಬೇಡ ಎಂದು ಮಕ್ಕಳು ಹೇಳುತ್ತಾರೆ. ಆದರೆ, ಕೆಲಸವಿಲ್ಲದೆ ಕೂರಲು ನನ್ನಿಂದ ಸಾಧ್ಯವಿಲ್ಲ. ವ್ಯಾಪಾರದಿಂದ ತೃಪ್ತಿ ಕಾಣುತ್ತಿದ್ದೇನೆ’ ಎನ್ನುತ್ತಾರೆ ಪ್ರೇಮಕ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.