ADVERTISEMENT

ರಸ್ತೆ ಮೇಲೆ ಮರದ ದ್ರವ: ನಿಯಂತ್ರಣ ತಪ್ಪಿದ ಬೈಕ್ ಸವಾರರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 4:49 IST
Last Updated 20 ಫೆಬ್ರುವರಿ 2021, 4:49 IST
ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆ ಎದುರು ಶುಕ್ರವಾರ ಮರದಿಂದ ಜೆಲ್ ರೂಪದ ದ್ರವ ರಸ್ತೆ ಮೇಲೆ ಬಿದ್ದ ಕಾರಣ ಬೈಕ್‌ ಸವಾರರು ಸ್ಕಿಡ್ ಆಗಿ ಬಿದ್ದರು
ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆ ಎದುರು ಶುಕ್ರವಾರ ಮರದಿಂದ ಜೆಲ್ ರೂಪದ ದ್ರವ ರಸ್ತೆ ಮೇಲೆ ಬಿದ್ದ ಕಾರಣ ಬೈಕ್‌ ಸವಾರರು ಸ್ಕಿಡ್ ಆಗಿ ಬಿದ್ದರು   

ಶಿವಮೊಗ್ಗ: ನಗರದ ನಂಜಪ್ಪ ಆಸ್ಪತ್ರೆ ಎದುರು ಕುವೆಂಪು ರಸ್ತೆಯಲ್ಲಿ ಶುಕ್ರವಾರ ಹಲವು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದಿವೆ.

ನಗರದಲ್ಲಿ ಬೆಳಿಗ್ಗೆ ಬಿದ್ದ ತುಂತುರು ಮಳೆ ಬಿದ್ದಿತ್ತು. ಇದರಿಂದ ಮಳೆ ನೀರು ಸೇರಿಕೊಂಡು ನಂಜಪ್ಪ ಆಸ್ಪತ್ರೆ ಎದುರಿನ ಮರದಿಂದ ಜೆಲ್ ರೂಪದ ದ್ರವ ರಸ್ತೆ ಮೇಲೆ ಬಿದ್ದಿತ್ತು. ಹೀಗಾಗಿ ಅನೇಕ ಬೈಕ್‍ಗಳು ಸವಾರರ ನಿಯಂತ್ರಣಕ್ಕೆ ಸಿಗದೆ ಜಾರಿ ಬಿದ್ದಿವೆ.

ಮೊದಲಿಗೆ ಎಣ್ಣೆಚೆಲ್ಲಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ನಂತರ ಮರದಿಂದ ದ್ರವ ಚಿಮ್ಮುತ್ತಿರುವುದು ಗೊತ್ತಾಗಿದೆ. ಹೆಚ್ಚಿನ ಸಂಖ್ಯೆಯ ವಾಹನ ಸವಾರರು ಜಾರಿಬಿದ್ದ ಕಾರಣ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪಾಲಿಕೆ ಸಿಬ್ಬಂದಿ ರಸ್ತೆಯನ್ನು ಸ್ವಚ್ಛಗೊಳಿಸಿದರು. ಸಂಚಾರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.

ADVERTISEMENT

ದ್ರವದಿಂದ ವಾಹನ ಸವಾರರಿಗೆ ತೊಂದರೆಯಾಗಿದ್ದರಿಂದ ಬ್ಯಾರಿಕೇಡ್‍ಗಳನ್ನು ಹಾಕಿ ವೇಗ ನಿಯಂತ್ರಿಸುವ ಎಚ್ಚರಿಕೆ ನೀಡಲಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.