ADVERTISEMENT

ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ: ನೀವು ಓದಬೇಕಾದ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 11:14 IST
Last Updated 22 ಜನವರಿ 2019, 11:14 IST
   

1) ಕ್ರಿಯಾಸಮಾಧಿ ಎಂದರೇನು?
https://bit.ly/2T26iQ8
ಕ್ರಿಯಾಸಮಾಧಿ ಎಂದರೇನು? ಅದನ್ನು ಹೇಗೆ ಮಾಡುತ್ತಾರೆ? ಜೀವಮಾನವಿಡೀ ಶ್ರದ್ಧೆಯಿಂದ ಇಷ್ಟಲಿಂಗ ಪೂಜಿಸಿದ ಅಧ್ಯಾತ್ಮ ಸಾಧಕರಿಗೆ ಲಿಂಗಾಯತ ಪರಂಪರೆ ಅಂತಿಮ ಗೌರವವನ್ನು ಹೇಗೆ ಸಲ್ಲಿಸುತ್ತದೆ?
–ಈ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಈ ಬರಹವನ್ನೂ ಪೂರ್ತಿ ಓದಿ.

2) ಶ್ರೀಗಳೇ ಸೂಚಿಸಿದ್ದಜಾಗದಲ್ಲಿ ಕ್ರಿಯಾ ಸಮಾಧಿ
https://bit.ly/2W6HaJL
ಸ್ವಾಮೀಜಿ ಕ್ರಿಯಾ ಸಮಾಧಿಗಾಗಿಯೇ ಅಂದಾಜು ₹3 ಕೋಟಿ ವೆಚ್ಚದಲ್ಲಿ ಭವನವನ್ನು ನಿರ್ಮಿಸಲಾಗಿದೆ.

3) ವಿಡಿಯೊ: ಸಿದ್ಧಗಂಗಾ ಶ್ರೀಗೆ ಅಂತಿಮ ನಮನ
https://bit.ly/2FD9r5P
ಶಿಕ್ಷಣದ ಮೂಲಕ ಲಕ್ಷಾಂತರ ಜನರಿಗೆ ಬದುಕು ರೂಪಿಸಿಕೊಟ್ಟ ತ್ರಿವಿಧ ದಾಸೋಹಿ, ಇಷ್ಟಲಿಂಗ ಪ್ರಿಯರಾದ ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿಯ ಬದುಕು, ಸಾಧನೆಯ ಪರಿಚಯ.

ADVERTISEMENT

4) ನಿಧನವಾರ್ತೆ: ಇಷ್ಟಲಿಂಗಪ್ರಿಯ ಶಿವಕುಮಾರ ಸ್ವಾಮೀಜಿ
https://bit.ly/2W7cx75
ಸ್ವಾಮೀಜಿ ಸೋಮವಾರ (ಜ.21)ಬೆಳಿಗ್ಗೆ 11.44ಕ್ಕೆ ಶಿವಸಾಯುಜ್ಯವನ್ನು ಹೊಂದಿದರು. ಮಂಗಳವಾರ (ಜ.22) ಮಧ್ಯಾಹ್ನ 3 ಗಂಟೆಯವರೆಗೆ ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ 4.30ಕ್ಕೆ ಸಿದ್ಧಗಂಗೆ ಮಠದ ಆವರಣದಲ್ಲಿಕ್ರಿಯಾಸಮಾಧಿ ನಡೆಯಲಿದೆ.

5) ಹುಟ್ಟಿದ ಊರಿಗೆ 25 ವರ್ಷ ಕಾಲಿಡದ ಸ್ವಾಮೀಜಿ
https://bit.ly/2MlZJoS
ಗುರುಗಳಿಗೆಪೂರ್ವಾಶ್ರಮದ ತಂದೆ ಅವಮಾನ ಮಾಡಿದರು ಎಂದು ಮಠದ ಅಧಿಕಾರ ವಹಿಸಿಕೊಂಡ ಮೇಲೂ ಶಿವಕುಮಾರ ಸ್ವಾಮೀಜಿ ವೀರಾಪುರಕ್ಕೆ ಹೋಗಲೇ ಇಲ್ಲ.

6) ಸಂಸ್ಕೃತಿ ವಿದ್ವಾಂಸ ಮಲ್ಲೇಪುರಂ ವೆಂಕಟೇಶ್ ಬರಹ: ದಾಸೋಹಗಳ ಮಹಾಯೋಗಿ
https://bit.ly/2FB4pGQ
ಅವರು ಬರುತ್ತಿದ್ದರೆ ಜಡವು ಜಂಗಮವಾಗಿ ಮಾರ್ಪಾಡು ಆಗುತ್ತಿತ್ತು. ಅವರು ದಾಪುಗಾಲು ಇಡುತ್ತ ಓಡಾಡುತ್ತಿದ್ದರೆ; ಹೆಳವನೂ ಓಡಾಡಬೇಕೆಂದೆನಿಸುತಿತ್ತು. ಚೈತನ್ಯದ ಮಂಗಳಮೂರ್ತಿಯೇ ನಮ್ಮ ಮುಂದೆ ಓಡಾಡುತ್ತಿದೆಯೆಂಬ ಭಾವ ಬಹುಕಾಲ ನನ್ನ ಮನಸ್ಸನ್ನು ಆವರಿಸಿತ್ತು

7)ಶ್ರೀಗಳ ಕ್ಷೌರ ಮಾಡಿದ್ದೆ, ಬಟ್ಟೆ ಒಗೆದಿದ್ದೆ: ಗುರುಬಸವ ಸ್ವಾಮೀಜಿ
https://bit.ly/2FO9URQ
ಸ್ವಾಮೀಜಿಗಳಿಗೆ ಹಲವು ವರ್ಷಗಳ ಕಾಲ ನಾನೇ ಕ್ಷೌರ (ಭದ್ರಕರಣ) ಮಾಡುತ್ತಿದ್ದೆ. ಮಠಾಧಿಪತಿಗಳ ಇತಿಹಾಸದಲ್ಲಿ ಕ್ಷೌರ ಮಾಡಿದ್ದು ಯಾರಾದರೂ ಇದ್ದರೆ ಅದು ನಾನೇ ಅನ್ನಿಸುತ್ತದೆ.

8) ಮಕ್ಕಳಲ್ಲಿ ಶರಣರ ಕಂಡ ಧನ್ಯಜೀವ
https://bit.ly/2T1m5i1
‘ಜ್ಞಾನ ದಾಸೋಹದ ಸಿಹಿ ಉಣಬಡಿಸುವೆ ಬನ್ನಿ’ ಎಂದು ಮಕ್ಕಳನ್ನು ಕರೆದು ತಮ್ಮ ತುಂಬು ತೋಳುಗಳಲ್ಲಿ ಅಪ್ಪಿದವರು ಶ್ರೀಗಳು.

9) ಅನಂತದೆಡೆಗೆ ನಡೆದ ’ದೇವರು’
https://bit.ly/2RZcVp3
‘ನೀವು ನನ್ನನ್ನು ಲೋಕಕ್ಕೆ ತಂದಿದ್ದೀರಿ. ಲೋಕದ ಸೇವೆಗೆ ನನ್ನನ್ನು ಬಿಡಿ. ನನ್ನ ಜೀವನವನ್ನು ಸಮಾಜಸೇವೆಗೋಸ್ಕರ ಸವೆಸುತ್ತೇನೆ’. –88 ವರ್ಷಗಳ ಹಿಂದೆಸನ್ಯಾಸ ದೀಕ್ಷೆ ಪಡೆದ ಸಂದರ್ಭದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರು ತಮ್ಮ ತಂದೆಗೆ ಹೇಳಿದ್ದ ಮಾತಿದು.

10) ಕಾರುಣ್ಯದ ನಿಧಿ, ಕಲ್ಯಾಣದ ಪ್ರತಿರೂಪ
https://bit.ly/2FQU7lp
ಶಿವಕುಮಾರ ಸ್ವಾಮೀಜಿ ಬಗ್ಗೆ ಸಾಹಿತಿ ಕುಂ. ವೀರಭದ್ರಪ್ಪ ಲೇಖನ

11) ಅರಿವಿನ ಜತೆ ಬದುಕು ಕೊಟ್ಟ ಲೋಕಗುರು
https://bit.ly/2WaJNtZ
ಸ್ವಾಮೀಜಿಯೊಂದಿಗೆ ಸಾವಿರಾರು ಮಕ್ಕಳ ಕಂಠದಿಂದ ಮೊಳಗುತ್ತಿದ್ದ ಪ್ರಾರ್ಥನೆ ಕೇಳಲೆಂದೇ ನಿತ್ಯ ನೂರಾರು ಜನ ಸೇರುತ್ತಿದ್ದರು.

12) ಅನ್ನದಾಸೋಹದಲ್ಲಿಯೇ ಶಿವನ ಸಾಕ್ಷಾತ್ಕಾರ
https://bit.ly/2R3nZwU
‘ಸಿದ್ಧಗಂಗಾಮಠ’, ಈ ಹೆಸರು ಕೇಳುತ್ತಿದ್ದಂತೆಯೇ ಕಣ್ಮುಂದೆ ಬರುವುದು ಅಲ್ಲಿನ ಅನ್ನದಾಸೋಹ. ಜ್ಞಾನದಾಸೋಹ ಮತ್ತು ಡಾ. ಶಿವಕುಮಾರ ಸ್ವಾಮೀಜಿ. ಹಲವು ದಶಕಗಳಿಂದ ನಡೆದು ಬಂದಿರುವ ಮಠದ ಈ ‘ದಾಸೋಹ’ ಪರಂಪರೆ ಇಡೀ ಜಗತ್ತನ್ನೇ ನಿಬ್ಬೆರಗುಗೊಳಿಸಿದೆ.

13) ಲೋಕಸೇವೆಯೂ ಈಶಸೇವೆಯೂ ನಿರಂತರ
https://bit.ly/2Ms63eM
ಸ್ವಾಮೀಜಿಗೆ 111 ವರ್ಷ ವಯಸ್ಸಾದರೂ, ಅವರು ಆಚರಿಸಿಕೊಂಡು ಬಂದ ಮಠದ ಪರಂಪರೆಗೆ ಹಲವು ತತಮಾನಗಳ ನಂಟಿತ್ತು. ಶ್ರೀಮಠಕ್ಕಿದ್ದ ಪರಂಪರೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು, ಇತರರಿಗೆ ಮಾದರಿಯಾಗಿ ಬದುಕಿದ ಸ್ವಾಮೀಜಿ ಎಲ್ಲರಿಗೂ ಪ್ರೇರಕ ಶಕ್ತಿಯಾಗಿದ್ದರು.

14) ಸರಳತೆಯ ಕಾಯಕಯೋಗಿ
https://bit.ly/2RTHoF5
ಬದುಕಿನಲ್ಲಿ ತೀರಾ ಸರಳವಾಗಿದ್ದ ಸ್ವಾಮೀಜಿ, ಆಹಾರದ ವಿಚಾರದಲ್ಲಿಯೂ ಸರಳತೆ ರೂಢಿಸಿಕೊಂಡಿದ್ದರು. ಕಾಯಕ ತತ್ವವನ್ನು ಅಡಿಗಡಿಗೂ ಅನುಸರಿಸಿದ್ದರು.

15) ಸನ್ಯಾಸ ದೀಕ್ಷೆ ತೊಟ್ಟಿದ್ದ ಸೆಂಟ್ರಲ್‌ ಕಾಲೇಜಿನ ವಿದ್ಯಾರ್ಥಿ
https://bit.ly/2FHzmcF
ಆ ವಿದ್ಯಾರ್ಥಿಯ ಹೆಸರು ಶಿವಣ್ಣ. ಬಿ.ಎ.ಆನರ್ಸ್‌ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದ ಶಿವಣ್ಣ ಅವರು ಮರುಳಾರಾಧ್ಯರ ಅಂತ್ಯಕ್ರಿಯೆ ಪೂರ್ಣಗೊಳಿಸಿ ಕಾಲೇಜಿಗೆ ಹಿಂತಿರುಗುವಾಗ ‘ಶಿವಕುಮಾರ ಸ್ವಾಮೀಜಿ’ ಆಗಿದ್ದರು!

16) ನಿಷ್ಕಾಮ ಕರ್ಮಯೋಗಿ ಶಿವಕುಮಾರ ಸ್ವಾಮೀಜಿ
https://bit.ly/2S7ymEB
ಶಿವಕುಮಾರ ಸ್ವಾಮೀಜಿ ಬಗ್ಗೆ ನಿರ್ಮಲಾನಂದನಾಥ ಸ್ವಾಮೀಜಿ ಲೇಖನ

17) ಗಡಿಜಿಲ್ಲೆಯ ನಂಟು ಹೊಂದಿದ್ದ ‘ಕಾಯಕ ಯೋಗಿ’
https://bit.ly/2R4zPXB
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗಿಯಾಗುತ್ತಿದೆ ಶ್ರೀಗಳು,ಹಲವರ ಮನೆಗಳಲ್ಲಿ ಪಾದಪೂಜೆಗೆ ತೆರಳುತ್ತಿದ್ದರು.

18) ಬಡ ಮಕ್ಕಳ ಮಠಕ್ಕೆ ಕರೆತಂದರು ಸಿದ್ಧಗಂಗರು–ಎಸ್‌ಐಟಿ ನಿರ್ದೇಶಕ ಚನ್ನಬಸಪ್ಪ ಮಾತು
https://bit.ly/2T8dvOG
ಬೆಟ್ಟದ ಮೇಲೆ ಮತ್ತು ಮಠದ ಬಳಿ ಒಂದು ವಿದ್ಯುತ್ ದೀಪ ಅಷ್ಟೇ. ಮಠಕ್ಕೆ ಬರುತ್ತಿದ್ದಂತೆ ನಗಾರಿ ಬಾರಿಸಿದರು. ‘ಊಟಕ್ಕೆ ಬರೋರು ಎಲ್ಲ ಬನ್ರಯ್ಯೋ...’ ಎಂದು ಕೂಗಿದರು. ನೇರವಾಗಿ ಊಟಕ್ಕೆ ಹೋದೆವು.

19) ತ್ರಿವಿಧ ದಾಸೋಹಿಗೆ ಆಶ್ರಯ ಕೊಟ್ಟಿದ್ದ ‘ಛತ್ರ’
https://bit.ly/2UbzhkJ
ಶಿವಕುಮಾರ ಸ್ವಾಮೀಜಿಯವರಿಗೆ ಪದವಿ ವ್ಯಾಸಂಗದ ಸಂದರ್ಭದಲ್ಲಿ ಅನ್ನ ಹಾಗೂ ಆಶ್ರಯ ನೀಡಿದ್ದು ಬೆಂಗಳೂರಿನ ‘ರಾವ್‌ ಬಹದ್ದೂರ್ ಧರ್ಮಪ್ರವರ್ತಕ ಗುಬ್ಬಿ ತೋಟದಪ್ಪನವರ ಧರ್ಮ ಛತ್ರ'.

20) ಮೊದಲಿಂದಲೂ ‘ಪ್ರಜಾವಾಣಿ’ ಓದಿನ ನಂಟು
https://bit.ly/2sHWjUg
‘ಪ್ರಜಾವಾಣಿ’ ಜತೆ ಸಿದ್ಧಗಂಗಾ ಮಠದ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ 71 ವರ್ಷಗಳ ಅವಿನಾಭಾವ ಸಂಬಂಧ ಇತ್ತು. ಪ್ರಜಾವಾಣಿ ಆರಂಭದ ದಿನದಿಂದಲೂ ಅನಾರೋಗ್ಯದಿಂದ ಆಸ್ಪತ್ರೆ ಸೇರುವ ಮುಂಚಿನ ದಿನದವರೆಗೂ ಪ್ರಜಾವಾಣಿ ಓದಿದ್ದು ಸ್ಮರಣೀಯ.

21) ಶಿರಸಿಗೆ ಬಂದಿದ್ದ ‘ನಡೆದಾಡುವ ದೇವರು’
https://bit.ly/2MoFsyX
2009ರ ನವೆಂಬರ್ 12ರಂದು ಶಿವಕುಮಾರ ಸ್ವಾಮೀಜಿ ಶಿರಸಿಗೆ ಭೇಟಿ ನೀಡಿದ್ದರು.

22) ‘ಸಿದ್ಧಗಂಗೆಗೆ ಬೆಳಕ ತಿಲಕವಿಟ್ಟವರಿವರು’: ಜಿ.ಎಸ್.ಸಿದ್ಧಲಿಂಗಯ್ಯ ಕವನ
https://bit.ly/2T4A8n5
ಶರಣಲೋಕದಲಿ ನಮ್ಮನುಸಿರಾಡಿಸುವರು
ಜ್ಞಾನದಲಿ ಪ್ರೀತಿಯಲಿ ಶಿವಕುಮಾರರು ಇವರು
ಬೆಳೆಯುತ್ತ ಹೋಗುವರು, ನಾವು ಬೆಳೆಬೆಳೆದಷ್ಟು

23) ‘ಸಿದ್ಧ, ಸೇವಾಕ್ಷೇತ್ರ: ನಿತ್ಯ ದಾಸೋಹಕ್ಕೆ’: ಚನ್ನವೀರ ಕಣವಿ ಕವನ
https://bit.ly/2U2VDEM
ಚೇತನವ ಹಿಡಿದು ಹೂಡಿ ಜನಮನೋರಥಕೆ
ಜಾತ್ರೆಯೂ ಬೇಕು ಸರ್ವರುತ್ಸಾಹ ಸೌಂದರಕೆ

24) ‘ಕಾಯಕಕ್ಕೆ ಕಳೆಯಿತ್ತು, ಬದುಕಿಗೇ ಬೆಲೆಯಿತ್ತು’: ಸಿದ್ಧಯ್ಯ ಪುರಾಣಿಕರ ಕವನ
https://bit.ly/2AVdwhz
ಸರ್ವಾಂಗ ಲಿಂಗಮಯ, ಮೈವೆತ್ತ ಕರುಣೆ ದಯ,
ಸರ್ವರನ್ನು ಪ್ರೀತಿಸುವ ದಿವ್ಯಹೃದಯ|
ಗುರಿಯು ಸಕಲರ ಉದಯ, ವರವು ಸರ್ವರಿಗಭಯ

25) ‘ಸದ್ದುಗದ್ದಲವಿಲ್ಲದ ಸಾಧನೆ ಇಲ್ಲಿ ಗದ್ದುಗೆಯೇರಿದೆ’: ಕವಿ ಶಿವರುದ್ರಪ್ಪ ಕವನ
https://bit.ly/2Hq6fMx
ಸದ್ದುಗದ್ದಲವಿಲ್ಲದ ಸಾಧನೆ ಇಲ್ಲಿ ಗದ್ದುಗೆಯೇರಿದೆ
ಕಾಯಕವೆ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ

26) ವಿಡಿಯೊ ಸುದ್ದಿ: ಶಿಸ್ತಿನ ’ಶ್ರೀ’ ಕಾಯಕ ಯೋಗಿ
https://bit.ly/2T2N253
ಶಿವಕುಮಾರ ಸ್ವಾಮೀಜಿ. ಅವರ ಬದುಕು, ಬದುಕಿನ ರೀತಿಯೇ ಓದಿಸಿಕೊಳ್ಳುವ; ಓದಲೇಬೇಕಾದ ಉತ್ತಮ ಪುಸ್ತಕ.

27) ವಿಡಿಯೊ: ಮಠದ ಆವರಣದಲ್ಲಿ ಸಾಗರೋಪಾದಿಯಲ್ಲಿ ನುಗ್ಗಿ ಬಂದ ಮಕ್ಕಳು
https://bit.ly/2Dpd1O

28)ಸಿದ್ದಗಂಗಾ ಶ್ರೀಗಳು ಹೀಗಿದ್ದರು: ನೆಟಿಜನ್‍ಗಳ ನುಡಿನಮನ

https://bit.ly/2HlNdqy

ಸ್ವಾಮೀಜಿ ಜತೆಗಿನ ಒಡನಾಟ, ಮಠಕ್ಕೆ ಭೇಟಿ ಕೊಟ್ಟಾಗ ಆದ ಅನುಭವಗಳು, ಅವರ ಮೇಲಿನ ಭಕ್ತಿ, ಪ್ರೀತಿ ಆದರಗಳ ಬಗ್ಗೆ ಫೇಸ್‍ಬುಕ್‍ನಲ್ಲಿ ಕಂಡು ಬಂದ ಕೆಲವೊಂದು ಆಪ್ತ ಬರಹಗಳು ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.