ADVERTISEMENT

ತುಮಕೂರು: 9 ಅನಧಿಕೃತ ಶಾಲೆ; ಮಕ್ಕಳನ್ನು ಸೇರಿಸದಿರಲು ಡಿಡಿಪಿಐ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಮೇ 2023, 12:35 IST
Last Updated 30 ಮೇ 2023, 12:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ದಕ್ಷಿಣ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ 9 ಖಾಸಗಿ ಶಾಲೆಗಳು ಅನುಮತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದು, ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದ್ದಾರೆ.

ತುಮಕೂರು ತಾಲ್ಲೂಕು ಲಿಂಗಾಪುರದ ಆರ್ಕಿಡ್ ಇಂಟರ್ ನ್ಯಾಷನಲ್ ಸ್ಕೂಲ್ (1ರಿಂದ 5ನೇ ತರಗತಿ), ವೀರಸಾಗರ ಅಣ್ಣಯ್ಯಪ್ಪನ ಗಾರ್ಡನ್‍ನಲ್ಲಿರುವ ಷಾಹಿನಾ ವ್ಯಾಲಿ ಸ್ಕೂಲ್ (1ರಿಂದ 5ನೇ ತರಗತಿ), ಗಂಗಸಂದ್ರ ರಸ್ತೆಯಲ್ಲಿರುವ ಶೇಷಾದ್ರಿಪುರಂ ಇಂಗ್ಲಿಷ್ ಸ್ಕೂಲ್ (1ರಿಂದ 5ನೇ ತರಗತಿ), ಶಿರಾಗೇಟ್‍ನಲ್ಲಿರುವ ಅರಿವು ಇಂಟರ್ ನ್ಯಾಷನಲ್ ಸ್ಕೂಲ್ (6ರಿಂದ 8ನೇ ತರಗತಿ), ಯಲ್ಲಾಪುರದಲ್ಲಿರುವ ವನಿತ ವಿದ್ಯಾ ಕೇಂದ್ರ (9 ಮತ್ತು 10ನೇ ತರಗತಿ)

ಚಿಕ್ಕಪೇಟೆಯಲ್ಲಿರುವ ಕಾಳಿಕಾದೇವಿ ವಿದ್ಯಾಮಂದಿರ (6ರಿಂದ 8ನೇ ತರಗತಿ), ತಿಪಟೂರು ತಾಲ್ಲೂಕು ರಂಗಾಪುರದಲ್ಲಿರುವ ನವ್ಯ ಹಿರಿಯ ಪ್ರಾಥಮಿಕ ಶಾಲೆ (6ರಿಂದ 8ನೇ ತರಗತಿ ಆಂಗ್ಲ ಮಾಧ್ಯಮ), ಚಿಕ್ಕನಾಯಕನಹಳ್ಳಿ ತಾಲ್ಲೂಕು ತೊರೆಸೂರಗೊಂಡನಹಳ್ಳಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ (6ರಿಂದ 8ನೇ ತರಗತಿ), ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟದಲ್ಲಿರುವ ವಿಶ್ವವಿಜಯ ವಿದ್ಯಾಶಾಲೆಗೆ (9 ಮತ್ತು 10ನೇ ತರಗತಿ) ಮಕ್ಕಳನ್ನು ದಾಖಲು ಮಾಡದಂತೆ ಎಚ್ಚರಿಸಿದ್ದಾರೆ.

ADVERTISEMENT

ಶಾಲಾ ಆಡಳಿತ ಮಂಡಳಿಗಳು ಶಿಕ್ಷಣ ಇಲಾಖೆಯ ನಿಯಮ ಹಾಗೂ ಮಾನದಂಡಗಳನ್ನು ಪೂರೈಸದ ಕಾರಣ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ಅನುಮತಿ ನೀಡಿಲ್ಲ. ಇಂತಹ ಶಾಲೆಗಳ ಪಟ್ಟಿಯನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಮಕ್ಕಳನ್ನು ಶಾಲೆಗೆ ದಾಖಲಿಸುವ ಮುನ್ನ ಇಲಾಖೆಯಿಂದ ನೋಂದಣಿ ಹಾಗೂ ಮಾನ್ಯತೆ ಹೊಂದಿರುವ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಮಾಹಿತಿ ಪಡೆಯಬೇಕು ಎಂದು ಸಲಹೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.