ADVERTISEMENT

ತುಮಕೂರು | ಉತ್ತಮ ಕೋರ್ಸ್‌ ಆಯ್ಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಮೇ 2024, 15:17 IST
Last Updated 12 ಮೇ 2024, 15:17 IST
<div class="paragraphs"><p>ತುಮಕೂರಿನಲ್ಲಿ ಶನಿವಾರ ರೋಟರಿ ತುಮಕೂರು ಪ್ರೇರಣ, ಎಎನ್‌ಎನ್‌ ಫೌಂಡೇಶನ್‌ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅವಿನಾಶ್‌, ತೇಜಸ್ವಿನಿ,  ನರಸಿಂಹರಾಜ, ವಿಜಯಕುಮಾರಿ ಮೊದಲಾದವರು ಪಾಲ್ಗೊಂಡಿದ್ದರು</p></div>

ತುಮಕೂರಿನಲ್ಲಿ ಶನಿವಾರ ರೋಟರಿ ತುಮಕೂರು ಪ್ರೇರಣ, ಎಎನ್‌ಎನ್‌ ಫೌಂಡೇಶನ್‌ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅವಿನಾಶ್‌, ತೇಜಸ್ವಿನಿ, ನರಸಿಂಹರಾಜ, ವಿಜಯಕುಮಾರಿ ಮೊದಲಾದವರು ಪಾಲ್ಗೊಂಡಿದ್ದರು

   

ತುಮಕೂರು: ‘ಸರಿಯಾದ ನಿರ್ಧಾರಗಳು ನಿರ್ಬಂಧಗಳಲ್ಲ, ಬದಲಾಗಿ ರೆಕ್ಕೆಗಳು’ ಎಂದು ಟಿಎಲ್‌ಪಿ ಸಂಸ್ಥೆಯ ಅವಿನಾಶ್‌ ಹೇಳಿದರು.

ನಗರದಲ್ಲಿ ಶನಿವಾರ ರೋಟರಿ ತುಮಕೂರು ಪ್ರೇರಣ, ಎನ್‌ಎನ್‌ ಫೌಂಡೇಶನ್‌ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ADVERTISEMENT

ಅವಿನಾಶ್‌ ಮತ್ತು ತೇಜಸ್ವಿನಿ ಪಿಯುಸಿ ನಂತರ ಇರುವ ವಿಭಿನ್ನ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳು, ಪೋಷಕರ ಜತೆಗೆ ಮಾಹಿತಿ ಹಂಚಿಕೊಂಡರು. ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುವ ಕುರಿತು ತಿಳಿಸಿದರು. ಸ್ನೇಹಿತರು ಇರುತ್ತಾರೆ ಎಂದು ಸಿಕ್ಕ ಕೋರ್ಸ್‌ಗಳಿಗೆ ಸೇರದೆ ಭವಿಷ್ಯ ಯೋಚಿಸಿ ಮುಂದಡಿ ಇಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ರೋಟರಿ ತುಮಕೂರು ಪ್ರೇರಣ ಕಾರ್ಯದರ್ಶಿ ಎ.ಉಮಾಮಹೇಶ್‌, ಪದಾಧಿಕಾರಿಗಳಾದ ಸುರೇಶ್ ತೊಗಟವೀರ್‌, ನರಸಿಂಹರಾಜ, ವಿಜಯಕುಮಾರಿ, ಗಂಗಾ, ಸಿ.ಎನ್‌.ಮಮತಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.