ADVERTISEMENT

ಪಾವಗಡ: ಮೊದಲ ಶ್ರಾವಣ ಶನಿವಾರಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 14:37 IST
Last Updated 18 ಆಗಸ್ಟ್ 2023, 14:37 IST
ಪಾವಗಡ ಶನೈಶ್ಚರ ದೇಗುಲವನ್ನು ಶ್ರಾವಣ ಶನಿವಾರದ ಪ್ರಯುಕ್ತ ಅಲಂಕಾರ ಮಾಡಲಾಗಿದೆ
ಪಾವಗಡ ಶನೈಶ್ಚರ ದೇಗುಲವನ್ನು ಶ್ರಾವಣ ಶನಿವಾರದ ಪ್ರಯುಕ್ತ ಅಲಂಕಾರ ಮಾಡಲಾಗಿದೆ   

ಪಾವಗಡ: ಮೊದಲ ಶ್ರಾವಣ ಶನಿವಾರದ ಪ್ರಯುಕ್ತ ಪಟ್ಟಣದ ಶನೈಶ್ಚರ ದೇಗುಲದಲ್ಲಿ ಸಕಲ ಸಿದ್ಧತೆ ನಡೆದಿದೆ.

ಶನೈಶ್ಚರ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು, ವೃತ್ತದ ಬಳಿ ಈಗಾಗಲೇ ವ್ಯಾಪಾರಿಗಳು ಮಳಿಗೆ ಹಾಕಿಕೊಂಡಿದ್ದಾರೆ. ಪಾದಾಚಾರಿ ರಸ್ತೆಗಳಲ್ಲಿ, ರಸ್ತೆ ವಿಭಜಕಗಳ ಬಳಿ ಅಂಗಡಿ ಹಾಕಲು ವ್ಯಾಪಾರಿಗಳು ತಮ್ಮದೇ ಶೈಲಿಯಲ್ಲಿ ಸ್ಥಳ ನಿಗದಿಪಡಿಸಿಕೊಂಡಿದ್ದಾರೆ.

ಸಹಸ್ರಾರು ಸಂಖ್ಯೆಯಲ್ಲಿ ವಿವಿಧ ರಾಜ್ಯಗಳಿಂದ ಭಕ್ತರು ಬರುವುದರಿಂದ ಪೊಲೀಸ್ ಇಲಾಖೆ ಬ್ಯಾರಿಕೇಡ್‌ ಹಾಕಿ ವಾಹನ ದಟ್ಟಣೆ ನಿಯಂತ್ರಿಸಲು ಸಿದ್ಧತೆ ನಡೆಸಿದೆ.

ADVERTISEMENT

ಸೆಪ್ಟಂಬರ್- 14ರವರೆಗೆ ವಿಶೇಷ ಪೂಜಾಕೈಂಕರ್ಯ ನಡೆಯಲಿದ್ದು, ಬರುವ ಭಕ್ತರಿಗಾಗಿ ಎಸ್‌ಎಸ್‌ಕೆ ಸಂಘದಿಂದ ಮೂಲ ಸೌಕರ್ಯ ಕಲ್ಪಿಸಲು ಶುಕ್ರವಾರ ತಯಾರಿ ನಡೆಸಲಾಯಿತು.

ಆಗಸ್ಟ್-19ರಂದು ಬೆಳಿಗ್ಗೆ 4 ಗಂಟೆಗೆ ತೈಲಾದಿ ಅಭಿಷೇಕ, ನವಗ್ರಹ ಪೂಜೆ, ರಾತ್ರಿ 7.30ಕ್ಕೆ ವಿಶೇಷ ಉತ್ಸವ ನಡೆಯಲಿದೆ.

ಪಾವಗಡ ಶನೈಶ್ಚರ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವಿಭಜಕದಲ್ಲಿ ಅಂಗಡಿ ಇಡಲು ಸ್ಥಳ ಕಾದಿರಿಸಿರುವುದು

ಆ.25ರಂದು ವರಲಕ್ಷ್ಮಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 9ಕ್ಕೆ ಶೀತಲಾಂಬ ಸೇವಿಗೆ ಸಹಸ್ರ ಕುಂಕುಮಾರ್ಚನೆ, ಮಹಾಮಂಗಳಾರತಿ, ರಾತ್ರಿ 7.30ಕ್ಕೆ ವಿಶೇಷ ಉತ್ಸವ ನಡೆಯಲಿದೆ. ಆಗಸ್ಟ್ 26, ಸೆಪ್ಟಂಬರ್ 2ರಂದು ಎಂದಿನಂತೆ ಅಭಿಷೇಕ, ಪೂಜೆ, ಹೂವಿನ ಮಂಟಪ ಉತ್ಸವ ನಡೆಯಲಿದೆ.

ಸೆಪ್ಟಂಬರ್ 9ರಂದು ನಾಲ್ಕನೇ ಶನಿವಾರದಂದು ರಾತ್ರಿ 7.30ಕ್ಕೆ ವಾದ್ಯಗೋಷ್ಠಿಯೊಂದಿಗೆ ಜ್ಯೇಷ್ಠದೇವಿ ಸಮೇತ ಶನೈಶ್ಚರ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಆನಂದರಾವ್‌ ಮಾಹಿತಿ ನೀಡಿದರು.

ಭಕ್ತರು ದರ್ಶನ, ಪೂಜೆ, ದೀಕ್ಷೆ, ವಸತಿ, ಊಟದ ವ್ಯವಸ್ಥೆಗಾಗಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.