ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿ ಜಡೆಯ ಗ್ರಾಮದ ಕಾಶಿ ಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನನ್ನು ಅನ್ಯರಿಗೆ ಮಾರದಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಅವರಿಗೆ ಮನವಿ ಸಲ್ಲಿಸಿದರು.
ದೇವಾಲಯಕ್ಕೆ ಸಂಬಂಧಿಸಿದಂತೆ ಸುಮಾರು 15.04 ಎಕರೆ ಜಮೀನು ರಾಮಸಾಗರ ಸರ್ವೇ ನಂಬರ್‌ನಲ್ಲಿದೆ. ಈ ದೇವಾಲಯವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ್ದು, ದೇವಾಲಯದ ಪೂಜೆ ಮಾಡುತ್ತಿರುವವರು ಈ ದೇವಾಲಯದ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ದೇವಾಲಯದ ಆಸ್ತಿ ಬೇರೆಯವರ ಪಾಲಾಗುವುದನ್ನು ಕೂಡಲೇ ತಡೆದು ದೇವಾಲಯದ ಹೆಸರಿನಲ್ಲೇ ಜಮೀನು ಉಳಿಸಿಕೊಡಬೇಕು ಎಂದು ಜಡೆಯ ಗ್ರಾಮದ ಕಾಶಿ ಲಿಂಗೇಶ್ವರ ಸ್ವಾಮಿ ದೇವಾಲಯದ ಅಧ್ಯಕ್ಷರಾದ ಶಂಕರಲಿಂಗಪ್ಪ, ಪ್ರಧಾನ ಅರ್ಚಕರಾದ ಶಿವರಾಜು, ಗುಡಿಗೌಡರಾದ ಪುಟ್ಟಸಿದ್ದಪ್ಪ, ಎನ್.ಗಂಗಾಧರ್ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.