ADVERTISEMENT

ತುಮಕೂರು: ಅಂಗನವಾಡಿ ಕಾರ್ಯಕರ್ತೆಯರ ಹಸಿವು ನೀಗಿಸಿದ ಮಠದ ದಾಸೋಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 9:47 IST
Last Updated 11 ಡಿಸೆಂಬರ್ 2019, 9:47 IST
ಅಂಗನವಾಡಿ ಕಾರ್ಯಕರ್ತೆಯ ಪ್ರತಿಭಟನೆ
ಅಂಗನವಾಡಿ ಕಾರ್ಯಕರ್ತೆಯ ಪ್ರತಿಭಟನೆ   

ತುಮಕೂರು:ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿಗೆ ಪಾದಯಾತ್ರೆ ಮಾಡಲು ರಾಜ್ಯದ ವಿವಿಧೆಡೆಯಿಂದ ಬಂದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿದ್ಧಗಂಗಾ ಮಠದ ದಾಸೋಹ ಹಸಿವು ನೀಗಿಸಿದೆ.

ಮಠದಲ್ಲಿಮುದ್ದೆ, ಅನ್ನ, ಸಾಂಬಾರು ಸೇವಿಸಿ ಕಾರ್ಯಕರ್ತೆಯರು ಹಸಿವು ನೀಗಿಸಿಕೊಂಡರು.ಮಂಗಳವಾರ ರಾತ್ರಿಯೂನೂರಾರು ಕಾರ್ಯಕರ್ತೆಯರು ಮಠದ ಆವರಣದಲ್ಲಿಯೇ ತಂಗಿದ್ದರು. ಬೆಳಿಗ್ಗೆ ಉಪ್ಪಿಟ್ಟು, ಪಲಾವ್ ಸ್ವೀಕರಿಸಿ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದರು.

'ಸಾಮಾನ್ಯ ದಿನಕ್ಕಿಂತ ಸುಮಾರು ಐದೂವರೆ ಸಾವಿರ ಜನ ಮಠಕ್ಕೆ ಮಂಗಳವಾರ, ಬುಧವಾರ ಬಂದಿದ್ದರು. ಅವರೆಲ್ಲರಿಗೂ ಸಾಕಾಗುವಷ್ಟು ಪ್ರಸಾದ ವಿನಿಯೋಗ ಆಗಿದೆ' ಎಂದು ಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಜಾವಾಣಿಗೆ ತಿಳಿಸಿದರು.

ADVERTISEMENT

ಬೀದಿ ನಾಟಕ

ಅಧಿಕಾರಿಗಳು ಅಂಗನವಾಡಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದಾಗ ನಡೆಯುವ ಪ್ರಸಂಗವನ್ನು ಬೀದಿ ನಾಟಕದ ಮೂಲಕ ಪ್ರಸ್ತುತ ಪಡಿಸುತ್ತಿರುವ ಉತ್ತರ ಕನ್ನಡದ ಕಾರ್ಯಕರ್ತೆಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.