ಕೊಡಿಗೇನಹಳ್ಳಿ: ಪುರವರ ಹೋಬಳಿ ಇಮ್ಮಡಗೊಂಡನಹಳ್ಳಿ ಗ್ರಾಮದಲ್ಲಿ ಗುರುವಾರ ಆಂಜನೇಯಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಎಂ.ಜಿ. ಶ್ರೀನಿವಾಸಮೂರ್ತಿ ಮಾತನಾಡಿ, ಜಾತ್ರೆಗೆ ದೂರದ ಗ್ರಾಮಗಳಿಂದ ಭಕ್ತರು ಬರುತ್ತಾರೆ. ಜಾತ್ರೆ, ಧಾರ್ಮಿಕ ಕಾರ್ಯಗಳು ಗ್ರಾಮದಲ್ಲಿ ಒಗ್ಗಟ್ಟು ಮೂಡಿಸುತ್ತವೆ. ಇದು ಮುಂಗಾರು ಪೂರ್ವ ನಡೆಯುವ ಜಾತ್ರೆಯಾಗಿರುವ ಕಾರಣ ಮುಂಗಾರು ಋತುವಿನಲ್ಲಿ ಉತ್ತಮ ಮಳೆ-ಬೆಳೆಯಾಗಲೆಂದು ಭಕ್ತರು ಮತ್ತು ರೈತರು ಸಂಕಲ್ಪ ಮಾಡಿಕೊಳ್ಳುತ್ತಾರೆ. ತೇರು ಎಳೆಯುವುದರ ಜೊತೆಗೆ ಹೂವು-ಬಾಳೆ ಹಣ್ಣನ್ನು ತೇರಿಗೆ ಅರ್ಪಿಸುತ್ತಾರೆ ಎಂದರು.
ಪ್ರದಾನ ಅರ್ಚಕ ವೇಣುಗೋಪಾಲ್, ನಾಗರಾಜಶಾಸ್ತ್ರಿ, ನಂಜಗೌಡರ ಕುಟುಂಬಸ್ಥರು, ಪುಟ್ಟರೆಡ್ಡಿ ಕುಟುಂಬದವರು, ಗ್ರಾಮಸ್ಥರು, ಸತೀಶ್ ಹಾಗೂ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.