ADVERTISEMENT

‘ಟ್ರಂಕು ತಟ್ಟೆ’ಗೆ ಅಪ್ಪ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 6:10 IST
Last Updated 11 ಜುಲೈ 2024, 6:10 IST

ತುಮಕೂರು: ಬಹುಮುಖಿ ಗೆಳೆಯರ ಬಳಗ, ಅಪೂರ್ವ ಪ್ರಕಾಶನದಿಂದ ಕೊಡಮಾಡುವ ‘ಅಪ್ಪ ಪ್ರಶಸ್ತಿಗೆ’ ಕಥೆಗಾರ ಗುರುಪ್ರಸಾದ್‌ ಕಂಟಲಗೆರೆ ಅವರ ‘ಟ್ರಂಕು ತಟ್ಟೆ’ ಸೇರಿ ನಾಲ್ಕು ಕೃತಿಗಳು ಭಾಜನವಾಗಿವೆ.

ಕೊಡಗಿನ ಸ್ಮಿತಾ ಅಮೃತರಾಜ್ ಸಂಪಾಜೆ ಅವರ ‘ನೆಲದಾಯ ಪರಿಮಳ’, ಬೆಂಗಳೂರಿನ ಟಿ.ವೆಂಕಟೇಶಮೂರ್ತಿ ಅವರ ‘ಕನ್ನಡ ನಾಟಕಗಳು– ರಾತ್ರಿ ರೂಪಕಗಳು’, ಬಾಗಲಕೋಟೆಯ ಮಲ್ಲಿಕಾರ್ಜುನ ಶಲ್ಲಿಕೇರಿ ಅವರ ‘ದೀಡೆಕರೆ ಜಮೀನು’ ಕಥಾ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು ₹5 ಸಾವಿರ ನಗದು, ಫಲಕ ಒಳಗೊಂಡಿದೆ.

ಆ. 4ರಂದು ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕರಾದ ಹಡವನಹಳ್ಳಿ ವೀರಣ್ಣಗೌಡ, ಮಂಜುನಾಥ್ ದಂಡಿನಶಿವರ, ಟಿ.ಸತೀಶ್ ಜವರೇಗೌಡರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.