ಕೊರಟಗೆರೆ: ನಿವೇಶನ ಹಾಗೂ ಒಡವೆ ವಿಚಾರವಾಗಿ ಎರಡನೇ ಪತ್ನಿ ಹಾಗೂ ಮಗನ ಕೊಲೆಗೆ ಯತ್ನಿಸಿದ್ದ ಪಟ್ಟಣದ ಕಾಳಿದಾಸ ಬಡಾವಣೆಯ ಚಾಂದ್ ಪಾಷಾ(44)ನಿಗೆ ಸೆಷನ್ಸ್ ನ್ಯಾಯಾಲದ ಜೀವಾವಧಿ ಶಿಕ್ಷೆ ಹಾಗೂ ₹1.10 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ಘಟನೆ ವಿವರ: 2020ರ ನವೆಂಬರ್‌ನಲ್ಲಿ ಚಾಂದ್ ಪಾಷಾ ನಿವೇಶನ ಮಾರಿ ಹಿರಿಯ ಹೆಂಡತಿ, ಮಗಳಿಗೆ ಒಡವೆ ಮಾಡಿಸಿಕೊಡಲು ಮುಂದಾಗಿದ್ದ. ಇದನ್ನು ಪ್ರಶ್ನಿಸಿದ್ದ ಆತನ ಕಿರಿಯ ಹೆಂಡತಿ ಜಭೀನ್ ತಾಜ್ ಹಾಗೂ ಆಕೆಯ ಮಗ ಮಹಮ್ಮದ್ ಅಲಿಯನ್ನು ಚಾಂದ್ ಪಾಷಾನಿಗೆ ದೊಣ್ಣೆಯಿಂದ ತಲೆಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಚಾಂದ್ ಪಾಷಾ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಆರೋಪ ಸಾಬೀತಾದ ಬಳಿಕ ನ್ಯಾಯಾಧೀಶ ಯಾಧವ ಕರ್ಕೇರ ಅವರು ಅಪರಾಧಿ ಚಾಂದ್ ಪಾಷ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ₹1 ಲಕ್ಷವನ್ನು ಮಹಮ್ಮದ್ ಅಲಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.
ಬಿ.ಎಂ.ನಿರಂಜನ ಮೂರ್ತಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.