ಕುಣಿಗಲ್ (ತುಮಕೂರು): ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಗುರುವಾರ ಇಲ್ಲಿಯ ಜಿಕೆಬಿಎಂಎಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಸ್ಥಳಕ್ಕೆ ಬಂದ ಯುವಕರ ಗುಂಪೊಂದು ಪ್ಯಾಲೆಸ್ಟೀನ್ ದೇಶದ ಬಾವುಟ ಪ್ರದರ್ಶನಕ್ಕೆ ಯತ್ನ ನಡೆಸಿದೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಯುವಕರು ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ
ಮೂವರು ಯುವಕರ ಆರೋಗ್ಯ ತಪಾಸಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಕುಣಿಗಲ್ ಪಟ್ಟಣದ ಷರೀಫ್ ಮೊಹಲ್ಲಾ ನಿವಾಸಿಗಳಾದ ಜಾವೀದ್ ಪಾಷಾ ಅಲಿಯಾಸ್ ಚೋಟು (23), ನ್ಯಾಮತ್ ಉಲ್ಲಾ (28) ಮತ್ತು ಫುರ್ಕಾನ್ (18) ಬಂಧಿತರು. ಫುರ್ಕಾನ್ ವಿದ್ಯಾರ್ಥಿಯಾಗಿದ್ದು, ಜಾವೀದ್ ಪೈಂಟಿಂಗ್ ಕೆಲಸ ಮಾಡುತ್ತಾನೆ.
ನ್ಯಾಮತ್ ಉಲ್ಲಾ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಈ ಮೂವರ ಹೊರತಾಗಿ
ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.