ತುಮಕೂರು: ಬೀನ್ಸ್, ಟೊಮೆಟೊ ಬೆಲೆ ಕಡಿಮೆಯಾಗಿದ್ದು, ಇತರೆ ಕೆಲವು ತರಕಾರಿಗಳು ಅಗ್ಗವಾಗಿವೆ. ಸೊಪ್ಪು ಸಹ ಎರಡು ತಿಂಗಳ ಹಿಂದಿನ ಮಟ್ಟಕ್ಕೆ ಇಳಿಕೆಯಾಗಿದೆ. ಬಾಳೆಹಣ್ಣು ದುಬಾರಿಯಾಗಿದ್ದು, ಕೊಳಿಮಾಂಸದ ದರ ಕಡಿಮೆಯಾಗಿದೆ.
ಟೊಮೆಟೊ ಇಳಿಕೆ: ಹಿಂದಿನ ವಾರಗಳಲ್ಲಿ ಟೊಮೆಟೊ ಕೆ.ಜಿ ₹100 ಗಡಿಗೆ ಸಮೀಪಿಸಿತ್ತು. ಆದರೆ ಈಗ ಸಾಕಷ್ಟು ಕಡಿಮೆಯಾಗಿದ್ದು, ಕೆ.ಜಿ ₹30–35ಕ್ಕೆ ಕುಸಿದಿದೆ. ಕಳೆದ ವಾರ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಬೀನ್ಸ್ ಈಗ ಕೆ.ಜಿ ₹70–80ಕ್ಕೆ ತಗ್ಗಿದೆ. ಆದರೆ ಕ್ಯಾರೇಟ್, ಬೀಟ್ರೂಟ್, ತೊಂಡೆಕಾಯಿ ಮತ್ತಷ್ಟು ದುಬಾರಿಯಾಗಿದೆ. ಗೆಡ್ಡೆಕೋಸು, ಮೂಲಂಗಿ, ಬದನೆಕಾಯಿ, ಹಸಿರು ಮೆಣಸಿನಕಾಯಿ ಇನ್ನಷ್ಟು ಅಗ್ಗವಾಗಿದೆ.
ಬೆಳ್ಳುಳ್ಳಿ ಏರಿಕೆ: ಏರಿಕೆಯತ್ತ ಮುಖ ಮಾಡಿರುವ ಈರುಳ್ಳಿ ಮತ್ತೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕೆಲ ವಾರಗಳಿಂದ ತಟಸ್ಥವಾಗಿದ್ದ ಬೆಳ್ಳುಳ್ಳಿ ಧಾರಣೆ ಒಮ್ಮೆಲೆ ಏರಿಕೆಯತ್ತ ಸಾಗಿದ್ದು, ಕೆ.ಜಿ ₹200–220ಕ್ಕೆ ತಲುಪಿದೆ. ಶುಂಠಿ ದರ ಸಹ ಕಡಿಮೆಯಾಗಿದ್ದು, ಸೌತೆಕಾಯಿ, ನಿಂಬೆ ಹಣ್ಣು ಅಲ್ಪ ಪ್ರಮಾಣದಲ್ಲಿ ಇಳಿದಿದೆ.
ಶುಭ ಕಾರ್ಯಗಳು ಮುಗಿಯುತ್ತಾ ಬಂದಿದ್ದು, ಮುಂದಿನ ವಾರದಿಂದ ಆಷಾಢ ಆರಂಭವಾಗಿದೆ. ಈ ವೇಳೆಗೆ ತರಕಾರಿ ಬೆಲೆ ಮತ್ತಷ್ಟು ಕಡಿಮೆಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಇಳಿದ ಸೊಪ್ಪು: ತೀವ್ರವಾಗಿ ಏರಿಕೆ ಕಂಡು ಕೆ.ಜಿ ₹100ರ ಗಡಿ ದಾಟಿದ್ದ ಸೊಪ್ಪಿನ ದರ ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹50–60, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಇಳಿಕೆಯಾಗಿದೆ.
ಬಾಳೆಹಣ್ಣು ದುಬಾರಿ: ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದ ಏಲಕ್ಕಿ ಬಾಳೆಹಣ್ಣು ಈಗ ದುಬಾರಿಯಾಗಿದ್ದು, ಕೆ.ಜಿ ₹85 ದಾಟಿದೆ. ಮೂಸಂಬಿ, ಪೈನಾಪಲ್, ಪಪ್ಪಾಯ, ಕಲ್ಲಂಗಡಿ ಹಣ್ಣು ಏರಿಕೆ ದಾಖಲಿಸಿದೆ. ತೋತಾಪುರಿ ಮಾವು ಕೆ.ಜಿ ₹100, ಬೇನಿಷಾ ಕೆ.ಜಿ ₹100ಕ್ಕೆ ಸಿಗುತ್ತಿದೆ.
ಅಡುಗೆ ಎಣ್ಣೆ: ಅಡುಗೆ ಎಣ್ಣೆ ದರದಲ್ಲಿ ಕೊಂಚ ಏರುಪೇರು ಕಂಡು ಬಂದಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹110–112, ಪಾಮಾಯಿಲ್ ಕೆ.ಜಿ ₹87–88, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಬೇಳೆ, ಧಾನ್ಯ: ಕೆಲವು ಬೇಳೆ ಕಾಳು ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೆಸರು ಬೇಳೆ, ಉದ್ದಿನ ಬೇಳೆ, ಹುರುಳಿಕಾಳು, ಬಟಾಣಿ ಕೊಂಚ ದುಬಾರಿಯಾಗಿದೆ. ಹೆಸರುಕಾಳು, ಕಡಲೆಬೀಜ ತುಸು ತಗ್ಗಿದೆ.
ಮೆಣಸು ಮತ್ತೆ ಹೆಚ್ಚಳ: ಮಸಾಲೆ ಪದಾರ್ಥಗಳಲ್ಲಿ ಮೆಣಸು, ಜೀರಿಗೆ ಮತ್ತೆ ದುಬಾರಿಯಾಗಿದ್ದು, ಏಲಕ್ಕಿ ಕೆ.ಜಿಗೆ ₹200 ಕಡಿಮೆಯಾಗಿದೆ. ಬಾದಾಮಿ, ದ್ರಾಕ್ಷಿ ಏರಿಕೆಯತ್ತ ಮುಖ ಮಾಡಿದೆ.
ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹260–280, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹210–230, ಹುಣಸೆಹಣ್ಣು ₹100–150, ಕಾಳುಮೆಣಸು ಕೆ.ಜಿ ₹750–780, ಜೀರಿಗೆ ಕೆ.ಜಿ ₹340–350, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹85–90, ಚಕ್ಕೆ ಕೆ.ಜಿ ₹240–280, ಲವಂಗ ಕೆ.ಜಿ ₹900–950, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,300, ಏಲಕ್ಕಿ ಕೆ.ಜಿ ₹3,000–3,200, ಬಾದಾಮಿ ಕೆ.ಜಿ ₹620–680, ಗೋಡಂಬಿ ಕೆ.ಜಿ ₹700–800, ಒಣದ್ರಾಕ್ಷಿ ಕೆ.ಜಿ ₹200–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಅಗ್ಗ: ಎರಡು ವಾರದಿಂದ ಇಳಿಕೆಯತ್ತ ಸಾಗಿರುವ ಕೋಳಿ ಮಾಂಸದ ದರ ಈ ವಾರವೂ ಕಡಿಮೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹240, ಸ್ಕಿನ್‌ಲೆಸ್ ಕೆ.ಜಿ ₹260, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಇಳಿಕೆಯಾಗಿದೆ.
ಮೀನು: ಕೆಲವು ವಾರಗಳಿಂದ ಮೀನು ದುಬಾರಿಯಾಗುತ್ತಲೇ ಸಾಗಿದ್ದು, ಈ ವಾರವೂ ಅದೇ ದಾರಿಯಲ್ಲಿ ಸಾಗಿದೆ. ಮುಂಗಾರು ಮಳೆ ಆರಂಭವಾಗಿದ್ದು, ಮೀನುಗಾರಿಕೆ ಚಟುವಟಿಕೆಗಳು ಕಡಿಮೆಯಾಗಿವೆ. ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
******
ಪಟ್ಟಿ.....
ಹಣ್ಣು (ಬೆಲೆ ಕೆ.ಜಿ ₹)
ಸೇಬು;200
ದಾಳಿಂಬೆ;200
ಮೂಸಂಬಿ;100
ಕಿತ್ತಳೆ;150
ಸಪೋಟ;100
ಏಲಕ್ಕಿ ಬಾಳೆ;85
ಪಚ್ಚಬಾಳೆ;37
ಸೀಬೆ;120
ಪೈನಾಪಲ್;100
ಪಪ್ಪಾಯ;30
ಕರಬೂಜ;50
ಕಲ್ಲಂಗಡಿ;30
ದ್ರಾಕ್ಷಿ;50
ಕಪ್ಪು ದ್ರಾಕ್ಷಿ;100
******
ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)
ತೊಗರಿ ಬೇಳೆ;170–180
ಕಡಲೆ ಬೇಳೆ;90–95
ಉದ್ದಿನ ಬೇಳೆ;140–170
ಹೆಸರು ಬೇಳೆ;120–125
ಕಡಲೆಕಾಳು;80–85
ಹೆಸರು ಕಾಳು;110–125
ಅಲಸಂದೆ;100–110
ಅವರೆಕಾಳು;150–160
ಹುರುಳಿಕಾಳು;78–82
ಹುರಿಗಡಲೆ;100–110
ಬಟಾಣಿ;100–105
ಕಡಲೆ ಬೀಜ;120–130
ಗೋಧಿ;38–44
ಸಕ್ಕರೆ;41–42
**
ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)
ಬೀನ್ಸ್;70–80
ಕ್ಯಾರೇಟ್;60–70
ಬೀಟ್ರೂಟ್;40–50
ಈರುಳ್ಳಿ;30–35
ಬೆಳ್ಳುಳ್ಳಿ;200–220
ಟೊಮೆಟೊ;30–35
ಆಲೂಗಡ್ಡೆ;35–40
ಗೆಡ್ಡೆಕೋಸು;40–50
ಮೂಲಂಗಿ;30–40
ಬೆಂಡೆಕಾಯಿ;40–50
ಬದನೆಕಾಯಿ;30–35
ಎಲೆಕೋಸು;35–40
ಹೂಕೋಸು(1ಕ್ಕೆ);40
ತೊಂಡೆಕಾಯಿ;30–40
ಹಾಗಲಕಾಯಿ;40–50
ನುಗ್ಗೆಕಾಯಿ;80–100
ಮೆಣಸಿನಕಾಯಿ;50–60
ಕ್ಯಾಪ್ಸಿಕಂ;40–50
ಶುಂಠಿ;80–100
ಸೌತೆಕಾಯಿ 1ಕ್ಕೆ;6–8
ನಿಂಬೆಹಣ್ಣು 1ಕ್ಕೆ;4–5
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.