ADVERTISEMENT

ಬೆಂಗಳೂರು– ತುಮಕೂರು ನಿತ್ಯ ರೈಲಿಗೆ ಪತ್ರ ಬರೆದ ಸಂಸದ ಬಸವರಾಜ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 9:35 IST
Last Updated 29 ಜೂನ್ 2019, 9:35 IST
ಬಸವರಾಜು
ಬಸವರಾಜು   

ತುಮಕೂರು: ತುಮಕೂರು ಸಂಸದ ಜಿ.ಎಸ್ ಬಸವರಾಜ್ ಅವರು ಈ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ರೈಲ್ವೆ ಸಚಿವ ಪಿಯೂಷ್ ಗೋಯಾಲ್‌ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಅವರಿಗೆ ಪತ್ರ ಬರೆದಿದ್ದಾರೆ.

ಬಿದರೆ ರೋಡ್ - ಎಂ.ಎಸ್ ಕೋಟೆ ರಸ್ತೆ ನಡುವೆ ನಿರ್ಮಾಣ ಆಗಬೇಕಿರುವ ಗುಬ್ಬಿ ಮೇಲ್ಸೇತುವೆ ಕಾಮಗಾರಿಗೆ ₹ 20 ಕೋಟಿ, ಸಿದ್ಧಗಂಗಾಮಠದ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ₹ 20 ಕೋಟಿ, ಭೀಮಸಂದ್ರದ 6ನೇ ವಾರ್ಡ್‌ನಲ್ಲಿ ಪಾದಚಾರಿ ಕೆಳ ಸೇತುವೆ 3 ಮೀ ಅಗಲ 2 1/2 ಮೀ ಎತ್ತರ ನಿರ್ಮಾಣ ಮಾಡುವುದು, ಔಷಧೀಯ ಮತ್ತು ಮಸಾಲೆ ಬೆಳೆಯಾದ ಬಜೆ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ 5 ಬೇಡಿಕೆಗೆ ಅನುದಾನ ಒದಗಿಸಲು ಕೋರಿದ್ದಾರೆ.

ಹೇಮಾವತಿ ನಾಲೆಗೆ ಭೇಟಿ: ಸಂಸದ ಜಿ.ಎಸ್. ಬಸವರಾಜ್, ಶಾಸಕರು, ಹಾಗೂ ಎಂಜಿನಿಯರ್‌ಗಳು ಶನಿವಾರ ( ಜೂನ್ 28) ಹೇಮಾವತಿ ನಾಲೆಯ ವೀಕ್ಷಣೆ ಮಾಡಲಿದ್ದಾರೆ. ಬೆಳಿಗ್ಗೆ 11ಕ್ಕೆ ಬಾಗೂರು ನವಿಲೆಯಿಂದ ಪ್ರಾರಂಭಿಸಿ ಮುಡ್ಲಾಪುರ, ಈಚನೂರು ಕೆರೆ, ಅರಳುಗುಪ್ಪೆ, ಹೆಗ್ಗೆರೆ, ಅಡವನಹಳ್ಳಿ, ಸುಂಕಾಪುರ, ಮಾರಶೆಟ್ಟಿಹಳ್ಳಿ, ಅದಲಗೆರೆ, ಭೈರೇಹಳ್ಳಿ, ಬುಗುಡನಹಳ್ಳಿಗೆ ಭೇಟಿ ನೀಡಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.