ADVERTISEMENT

ಬಾವುಣಿಕೆಯ ಬೇರು ಅಮ್ಮ' ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಮೇ 2024, 5:06 IST
Last Updated 24 ಮೇ 2024, 5:06 IST
<div class="paragraphs"><p>ತುಮಕೂರಿನಲ್ಲಿ ಗುರುವಾರ ಪ್ರೊ.ಕಟಾವೀರನಹಳ್ಳಿ ನಾಗರಾಜ ಸಂಪಾದಕತ್ವದ ‘ಬಾವುಣಿಕೆಯ ಬೇರು ಅಮ್ಮ’ ಕೃತಿ ಬಿಡುಗಡೆ ಮಾಡಲಾಯಿತು. ಮಿಮರ್ಶಕಿ ಗೀತಾ ವಸಂತ, ಸಂಸ್ಕೃತಿ ಚಿಂತಕಿ ಶಾಂತಾ ಸಣ್ಣಗುಡ್ಡಯ್ಯ, ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಎಂ.ಎಚ್.ನಾಗರಾಜ್ ಇತರರು ಭಾಗವಹಿಸಿದ್ದರು</p></div>

ತುಮಕೂರಿನಲ್ಲಿ ಗುರುವಾರ ಪ್ರೊ.ಕಟಾವೀರನಹಳ್ಳಿ ನಾಗರಾಜ ಸಂಪಾದಕತ್ವದ ‘ಬಾವುಣಿಕೆಯ ಬೇರು ಅಮ್ಮ’ ಕೃತಿ ಬಿಡುಗಡೆ ಮಾಡಲಾಯಿತು. ಮಿಮರ್ಶಕಿ ಗೀತಾ ವಸಂತ, ಸಂಸ್ಕೃತಿ ಚಿಂತಕಿ ಶಾಂತಾ ಸಣ್ಣಗುಡ್ಡಯ್ಯ, ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಎಂ.ಎಚ್.ನಾಗರಾಜ್ ಇತರರು ಭಾಗವಹಿಸಿದ್ದರು

   

ತುಮಕೂರು: ‘ಪ್ರತಿಯೊಬ್ಬರ ಬದುಕನ್ನು ಕಟ್ಟುವ ಶಕ್ತಿ ತಾಯಿಗಿದೆ. ಇತಿಹಾಸಕ್ಕೂ ಮನ್ನವೇ ತಾಯಿ ಇದ್ದಾರೆ. ನಮ್ಮ ಪರಂಪರೆಯಲ್ಲೇ ತಾಯ್ತನ ಬೆಳೆದು ಬಂದಿದೆ’ ಎಂದು ವಿಮರ್ಶಕಿ ಗೀತಾ ವಸಂತ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಗುರುವಾರ ಶತಭಿಷ ಪ್ರಕಾಶನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಪ್ರೊ.ಕಟಾವೀರನಹಳ್ಳಿ ನಾಗರಾಜ ಸಂಪಾದಕತ್ವದ ‘ಬಾವುಣಿಕೆಯ ಬೇರು ಅಮ್ಮ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

‘ಕೆ.ಎಸ್.ನರಸಿಂಹಸ್ವಾಮಿ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ಹುಟ್ಟಿ ಮಣ್ಣಾಗುವ ಮಧ್ಯದಲ್ಲಿ ಕಣ್ಣು ತೆರೆಸುವವಳು ತಾಯಿ. ತಾಯಿಯ ವಾತ್ಸಲ್ಯ, ತ್ಯಾಗ, ಸಮಾನತೆಗೆ ಬೆಲೆ ಕಟ್ಟಲಾಗದು ಎಂದು ತಿಳಿಸಿದ್ದಾರೆ. ಬೇಂದ್ರೆ ಕಾವ್ಯದಲ್ಲಿ ತಾಯ್ತನದ ತತ್ವವಿದೆ. ಅವರು ಪಂಚ ಮಾತೆಯರನ್ನು ಕಾಣುತ್ತಾರೆ. ತಾಯ್ತನವನ್ನು ವೈಭವೀಕರಿಸಿ ಮಾತನಾಡುತ್ತೇವೆ. ಆದರೆ ಅದರ ಆಳವನ್ನು ತಿಳಿಯಬೇಕಾದರೆ ಜೀವಶಾಸ್ತ್ರ, ಮನಃಶಾಸ್ತ್ರದ ಕಲ್ಪನೆ ಇರಬೇಕು. ಆಗ ಮಾತ್ರ ತಾಯಿ ಅರ್ಥವಾಗುತ್ತಾಳೆ’ ಎಂದು ಹೇಳಿದರು.

ಕೃತಿ ಬಿಡುಗಡೆ ಮಾಡಿದ ಸಂಸ್ಕೃತಿ ಚಿಂತಕಿ ಶಾಂತಾ ಸಣ್ಣಗುಡ್ಡಯ್ಯ, ‘ಸಮಾಜದಲ್ಲಿ ಹೆಣ್ಣಿಲ್ಲದೆ ಬದುಕಿಲ್ಲ. ನಾಗರಾಜ ಅವರಲ್ಲಿ ಸಹನೆ, ತಾಳ್ಮೆ ಇರುವುದರಿಂದ ಇಂತಹ ತಾಯ್ತನದ ಪುಸ್ತಕ ಹೊರ ಬಂದಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ತಾಯ್ತನ ಹೆಣ್ಣಿನಲ್ಲಿ ಮಾತ್ರ ಇದ್ದರೆ ಸಾಲದು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಬರಬೇಕು. ತಾಯ್ತನದ ಪ್ರೀತಿ, ಸಹನೆ, ತ್ಯಾಗ ಮನೋಭಾವ ಬಂದರೆ ಇಡೀ ಮನುಕುಲದ ಜೀವನ ಸಾರ್ಥಕವಾಗುತ್ತದೆ’ ಎಂದರು.

ಇತ್ತೀಚಿನ ದಿನಗಳಲ್ಲಿ ತಾಯ್ತನ ಮಾಯವಾಗುತ್ತಿದ್ದು, ತಾಯಿಯೇ ಮಗುವನ್ನು ಕೊಂದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ತಾಯಂದಿರಿಗೆ ಆಶ್ರಯ ನೀಡದೆ ಅನಾಥಾಶ್ರಮದಲ್ಲಿ ಬಿಟ್ಟಿರುವ ಮಕ್ಕಳೂ ಇದ್ದಾರೆ. ಇಂತಹ ಸಂಕ್ರಮಣ ಕಾಲಘಟ್ಟದಲ್ಲಿ ಸಮಾಜಕ್ಕೆ ತಾಯ್ತನ ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಲೇಖಕ ಕಟಾವೀರನಹಳ್ಳಿ ನಾಗರಾಜ, ‘ಕೃತಿ ಹೊರತರುವ ಪ್ರಯತ್ನ 21 ವರ್ಷಗಳಿಂದ ನಡೆಯುತ್ತಿತ್ತು. ವೃತ್ತಿ ಜೀವನದ ಗೆಳೆಯರು, ಶಿಷ್ಯರು ಪ್ರೋತ್ಸಾಹ ನೀಡಿದ್ದಾರೆ’ ಎಂದು ಸ್ಮರಿಸಿದರು.

ನಿವೃತ್ತ ಪ್ರಾಧ್ಯಾಪಕ ತಿಮ್ಮನಹಳ್ಳಿ ವೇಣುಗೋಪಾಲ್, ಲೇಖಕಿ ಬಾ.ಹ.ರಮಾಕುಮಾರಿ, ಪರಿಷತ್ತಿನ ಕೋಶಾಧ್ಯಕ್ಷ ಎಂ.ಎಚ್.ನಾಗರಾಜ್, ಉಪನ್ಯಾಸಕಿ ಶ್ರೀದೇವಿ, ರಾಣಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.