ADVERTISEMENT

ಪಾವಗಡ | ಬಸ್ ಹರಿದು 19 ಕುರಿಗಳ ಸಾವು, ಕುರಿಗಾಹಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2023, 12:54 IST
Last Updated 26 ನವೆಂಬರ್ 2023, 12:54 IST
<div class="paragraphs"><p>ಕುರಿಗಳು (ಪ್ರಾತಿನಿಧಿಕ ಚಿತ್ರ)</p></div>

ಕುರಿಗಳು (ಪ್ರಾತಿನಿಧಿಕ ಚಿತ್ರ)

   

ಪಾವಗಡ: ತಾಲ್ಲೂಕಿನ ಕೆಂಚಗಾನಹಳ್ಳಿ ಗೇಟ್ ಬಳಿ ಭಾನುವಾರ ಕುರಿಗಳ ಮೇಲೆ ಕೆಎಸ್ಆರ್‌ಟಿಸಿ ಬಸ್ ಹರಿದು 19 ಕುರಿಗಳು ಸತ್ತಿವೆ.

ದೊಡ್ಡಹಳ್ಳಿ ಕಡೆಯಿಂದ ಪಳವಳ್ಳಿ ಕಡೆಗೆ ಹೋಗುತ್ತಿದ್ದ ದೊಡ್ಡತಿಮ್ಮಯ್ಯ ಎಂಬುವರಿಗೆ ಸೇರಿದ ಕುರಿ ಮಂದೆ ಮೇಲೆ ವೈ.ಎನ್ ಹೊಸಕೋಟೆಯಿಂದ ಪಟ್ಟಣಕ್ಕೆ ಬರುತ್ತಿದ್ದ ಸರ್ಕಾರಿ ಬಸ್ ಹರಿದಿದೆ. ಕುರಿಗಾಹಿ ದುಗ್ಗಪ್ಪ ಎಂಬುವರಿಗೆ ತೀವ್ರ ಗಾಯವಾಗಿದೆ. ಮೇವಿಗಾಗಿ ಆಂಧ್ರದ ಕದಿರಿದೇವರಪಲ್ಲಿಗೆ ಹೋಗಿ ಗ್ರಾಮಕ್ಕೆ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.