ಗುಬ್ಬಿ: ತಾಲ್ಲೂಕಿನ ಎಂ.ಎಚ್. ಪಟ್ಟಣ ಕೆರೆಯ ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಹಲವರಿಗೆ ಗಾಯಗಳಾಗಿವೆ.
ಭಾನುವಾರ ಬೆಳಿಗ್ಗೆ ಗುಬ್ಬಿ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಎಂಎಚ್ ಪಟ್ಟಣ ಕೆರೆಯ ಬಳಿ ಎಡಭಾಗಕ್ಕೆ ಚಲಿಸುವ ಬದಲು ನೇರವಾಗಿ ಚಲಿಸಿ ತುಮಕೂರು ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಯಾವುದೇ ಪ್ರಾಣಪಾಯವಾಗಿಲ್ಲದಿದ್ದರೂ, ಲಾರಿ ಮತ್ತು ಬಸ್ ಚಾಲಕರಿಗೆ ಹಾಗೂ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ.
ಅಪಘಾತವಾದ ಸ್ಥಳದಲ್ಲಿ ರಸ್ತೆ ವಿಭಜಕವಿದ್ದು ತುಮಕೂರು ಕಡೆ ಸಾಗುವ ವಾಹನಗಳು ಎಡಭಾಗಕ್ಕೆ ಚಲಿಸಬೇಕಿದೆ. ಆದರೆ ಆ ಜಾಗದಲ್ಲಿ ವ್ಯವಸ್ಥಿತ ಸೂಚನಾ ಫಲಕ ಹಾಗೂ ಎಚ್ಚರಿಕೆಯ ದೀಪ ಅಳವಡಿಸದಿರುವುದರಿಂದ ವಾಹನ ಚಾಲಕರಿಗೆ ಗೊಂದಲ ಉಂಟಾಗುವುದರಿಂದಲೇ ಹೆಚ್ಚು ಅಪಘಾತ ಸಂಭವಿಸುತ್ತಿವೆ ಎನ್ನುತ್ತಾರೆ ಸ್ಥಳೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.