ADVERTISEMENT

ವೀರಶೈವ ಲಿಂಗಾಯಿತರ ಎಲ್ಲಾ ಒಳ ಪಂಗಡಗಳು ಒಂದಾಗಿ: ಎಸ್.ಕೆ.ರಾಜಶೇಖರ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 13:56 IST
Last Updated 8 ಜನವರಿ 2024, 13:56 IST
ತಿಪಟೂರಿನಲ್ಲಿ ಭಾನುವಾರ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ತಿಪಟೂರು ಇದರ ಜಾಗೃತ ಸಭೆ ನಡೆಯಿತು
ತಿಪಟೂರಿನಲ್ಲಿ ಭಾನುವಾರ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ತಿಪಟೂರು ಇದರ ಜಾಗೃತ ಸಭೆ ನಡೆಯಿತು   

ತಿಪಟೂರು: ಸಮುದಾಯದ ಶಕ್ತಿ ವೃದ್ಧಿಸಿಕೊಳ್ಳಲು ತಾಲ್ಲೂಕಿನ ಎಲ್ಲ ವೀರಶೈವ ಲಿಂಗಾಯಿತ ಒಳ ಪಂಗಡಗಳು ಒಂದಾಗಿ ಉತ್ತಮ ಸಮಾಜವನ್ನು ಕಟ್ಟುವ ಕಾರ್ಯವಾಗಬೇಕಿದೆ ಎಂದು ಎಸ್‌ವಿಪಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಕೆ.ರಾಜಶೇಖರ್ ಹೇಳಿದರು.

ತಿಪಟೂರು ನಗರದ ಎಸ್.ವಿ.ಪಿ.ವಿದ್ಯಾಸಂಸ್ಥೆಯಲ್ಲಿ ಭಾನುವಾರ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ತಿಪಟೂರು ಇದರ ಜಾಗೃತ ಸಭೆಯಲ್ಲಿ ಮಾತನಾಡಿದರು.

ಪ್ರತಿಯೊಂದು ಸಮುದಾಯದಲ್ಲಿಯೂ ಸಂಘಟನೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ನಿಭಾಯಿಸಿಕೊಂಡು ಹೋಗುವುದು ಅಷ್ಟೇ ಮುಖ್ಯ. ತಾಲ್ಲೂಕಿನ ಎಲ್ಲ ಪಂಗಡಗಳ ಜನರನ್ನು ಜತೆಯಲ್ಲಿ ತೆಗೆದುಕೊಂಡು ಹೋಗುವ ಕಾರ್ಯವಾಗಬೇಕಿದೆ ಎಂದರು.

ADVERTISEMENT

ವೀರಶೈವ ಲಿಂಗಾಯಿತ ಸಂಘಟನೆಯ ಅಧ್ಯಕ್ಷ ರೇಣುಕಾರಾಧ್ಯ ಮಾತನಾಡಿ, ತಾಲ್ಲೂಕಿನಲ್ಲಿ ಬಲಿಷ್ಠ, ನಿಷ್ಪಕ್ಷಪಾತ ಸಂಘಟನೆ ಕಟ್ಟುವ ಅಗತ್ಯವಿದೆ. ಈ ತಾಲ್ಲೂಕಿನ ಏಳಿಗೆ, ಸಮುದಾಯದ ಪರ ಕೆಲಸ ಮಾಡುವ ಸಂಘಟನೆಯನ್ನು ರೂಪಿಸಲು ಚಿಂತನೆ ಮಾಡಲಾಗಿದೆ ಎಂದರು.

ಮುಖ್ಯ ಅತಿಥಿ ನವಿಲೆ ಪರಮೇಶ್ ಮಾತನಾಡಿದರು. ಸಂಘದ ಉಪಾಧ್ಯಕ್ಷ ರಘುನಂದನ್, ಗುಡಿಗೊಂಡನಹಳ್ಳಿ ಗ್ರಾ.ಪಂ ಅಧ್ಯಕ್ಷ ವಿಠಲಾಪುರ ಪರಮೇಶ್ವರಪ್ಪ, ಶ್ಯಾಮಸುಂದರ್, ಆಲದಹಳ್ಳಿ ವಿಶ್ವನಾಥ್, ಹೊಸೂರು ರಾಜಶೇಖರ್, ಕುಮಾರಸ್ವಾಮಿ, ಅನಗೊಂಡನಹಳ್ಳಿ ಲಿಂಗಮೂರ್ತಿ, ಅನಗೊಂಡನಹಳ್ಳಿ ಅರುಣ್ ಕುಮಾರ್, ಬಸವರಾಜು, ಕಾಮತರಾಜು, ಈಡೇನಹಳ್ಳಿ ಗುರುಸ್ವಾಮಿ, ಕಲ್ಲೇಗೌಡನಪಾಳ್ಯದ ಮೋಹನ್, ಬಸವರಾಜು, ಕೆರೆಗೋಡಿ ಸುಧಾ ಪ್ರಕಾಶ್, ಸೂಗೂರು ಶಿವಪ್ರಕಾಶ್, ಹರಚನಹಳ್ಳಿ ಹೇಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.