ತುಮಕೂರು: ಅಂತರರಾಷ್ಟ್ರೀಯ ಪಲ್ಸ್ ಪೊಲಿಯೋ ದಿನಾಚರಣೆ ಅಂಗವಾಗಿ ರೋಟರಿ, ಇನ್ನರ್ ವೀಲ್ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಜಾಥಾ ನಡೆಯಿತು. ಪೊಲಿಯೋ ನಿರ್ಮೂಲನೆಗೆ ಜಾಗೃತಿ ಮೂಡಿಸಲಾಯಿತು.
ಡಿಸೆಂಬರ್ 24ರಂದು 5 ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಹನಿ ಹಾಕುವ ಅಭಿಯಾನ ನಡೆಯಲಿದೆ. ಅಂದು ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಿಸಬೇಕು. ಮುಂದೆ ಮಕ್ಕಳು ಅಂಗವಿಕಲರಾಗದಂತೆ ತಡೆಯುವಂತೆ ಮನವಿ ಮಾಡಲಾಯಿತು.
ಬಿಜಿಎಸ್ ವೃತ್ತದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್ ಜಾಥಾಕ್ಕೆ ಚಾಲನೆ ನೀಡಿದರು. ಅಶೋಕ ರಸ್ತೆ, ಗುಂಚಿ ವೃತ್ತ, ಜನರಲ್ ಕಾರ್ಯಪ್ಪ ರಸ್ತೆ ಮೂಲಕ ಸಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೊನೆಗೊಂಡಿತು. ರೋಟರಿ, ಇನ್ನರ್ ವೀಲ್, ಸ್ಕೌಟ್ಸ್ ಹಾಗೂ ಗೈಡ್ಸ್, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರೋಟರಿ ತುಮಕೂರು ಸೆಂಟ್ರಲ್ ಅಧ್ಯಕ್ಷೆ ಸರೋಜಮ್ಮ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಸ್ಗರ್ ಬೇಗ್, ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ವೀರೇಶ್ ಕಲ್ಮಠ, ಇನ್ನರ್ ವೀಲ್ ಅಧ್ಯಕ್ಷೆ ಶೀಲಾ ಮಧು, ಪದಾಧಿಕಾರಿಗಳಾದ ರೇಖಾ ಕುಮಾರ್, ಮಂಜುಳಾ, ಲತಾ ಮಹೇಶ್ ಮೊದಲಾದವರು ಜಾಥಾ ನೇತೃತ್ವ ವಹಿಸಿದ್ದರು.
ರೋಟರಿ ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ರೋಟರಿ ಸಂಯೋಜಕ ಬೆಳ್ಳಿ ಲೋಕೇಶ್, ರೋಟರಿ ವಲಯ ಪಾಲಕ ಎಂ.ಎನ್.ಪ್ರಕಾಶ್, ಸಹಾಯಕ ಪಾಲಕ ಜಿ.ಎನ್.ಮಹೇಶ್, ತುಮಕೂರು ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ಕಾರ್ಯದರ್ಶಿ ಹೆಬ್ಬೂರು ಶ್ರೀನಿವಾಸಮೂರ್ತಿ, ರೋಟರಿ ಪ್ರೇರಣಾ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ್ ಮೆಳೆಹಳ್ಳಿ, ರೋಟರಿ ಈಸ್ಟ್ ಅಧ್ಯಕ್ಷ ಫಣೀಂದ್ರ ಸುರಭಿ, ರೋಟರಿ ಸಿದ್ಧಗಂಗಾ ಅಧ್ಯಕ್ಷ ನರಸಿಂಹಮೂರ್ತಿ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.