ADVERTISEMENT

ಕುಣಿಗಲ್‌ | ಜಾತಿ ನಿಂದನೆ: ಅರ್ಚಕ ಬಂಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 2:55 IST
Last Updated 8 ಅಕ್ಟೋಬರ್ 2024, 2:55 IST

ಕುಣಿಗಲ್‌: ದೇವಸ್ಥಾನದ ಹುಂಡಿ ಮುಟ್ಟಿದ ದೇಗುಲದ ಭದ್ರತಾ ಸಿಬ್ಬಂದಿಯ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ಬೆಟ್ಟದ ರಂಗಸ್ವಾಮಿ ದೇವಸ್ಥಾನದ ಅರ್ಚಕನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಅರ್ಚಕ ರಾಕೇಶ್‌ ವಿರುದ್ಧ ದೇಗುಲದ ಭದ್ರತಾ ಸಿಬ್ಬಂದಿ ಪಾರ್ಥರಾಜು ಎಂಬುವರು ದೂರು ನೀಡಿದ್ದರು. ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಕುಣಿಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅದೇ ದಿನ ಮಧ್ಯಾಹ್ನ ಅರ್ಚಕ ರಾಕೇಶ್‌  ಕೋಲಿನಿಂದ ಹಲ್ಲೆ ತನ್ನ ಮೇಲೆ ಮಾಡಿದ್ದಾರೆ ಎಂದು ಭದ್ರತಾ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ.  ಅರ್ಚಕ ಕೋಲಿನಿಂದ ಭದ್ರತಾ ಸಿಬ್ಬಂದಿಗೆ ಹೊಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಇಲ್ಲಿ ನೀನು ಕುಳಿತುಕೊಳ್ಳುವಂತಿಲ್ಲ. ಇದು ಸರ್ಕಾರದ ದೇವಾಲಯ ಇಲ್ಲಿಂದ ಹೋಗು’ ಎಂದು ಅರ್ಚಕ ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.