ADVERTISEMENT

ಚಿಕ್ಕನಾಯಕನಹಳ್ಳಿ: ಚಂದ್ರಗುತ್ತಿ ಯಲ್ಲಮ್ಮ ನೂತನ ದೇಗುಲ ಪ್ರವೇಶ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 13:53 IST
Last Updated 5 ಡಿಸೆಂಬರ್ 2023, 13:53 IST
<div class="paragraphs"><p>ಚಿಕ್ಕನಾಯಕನಹಳ್ಳಿಯಲ್ಲಿ ಚಂದ್ರಗುತ್ತಿ ಯಲ್ಲಮ್ಮದೇವಿ ಉತ್ಸವ ಅದ್ದೂರಿಯಾಗಿ ನೆರವೇರಿತು</p></div>

ಚಿಕ್ಕನಾಯಕನಹಳ್ಳಿಯಲ್ಲಿ ಚಂದ್ರಗುತ್ತಿ ಯಲ್ಲಮ್ಮದೇವಿ ಉತ್ಸವ ಅದ್ದೂರಿಯಾಗಿ ನೆರವೇರಿತು

   

ಚಿಕ್ಕನಾಯಕನಹಳ್ಳಿ: ಪಟ್ಟಣದ ರೇವಣಸಿದ್ದೇಶ್ವರ ಮಠದ ಬಳಿ ಚಂದ್ರಗುತ್ತಿ ಯಲ್ಲಮ್ಮದೇವಿ ದೇಗುಲ ಪ್ರಾರಂಭೋತ್ಸವ ಪ್ರಯುಕ್ತ ಹೋಮ ಹಾಗೂ ಪೂಜಾ ವಿಧಿ, ವಿಧಾನ ನೆರವೇರಿದವು.

ಭಾನುವಾರ ಧ್ವಜಾರೋಹಣದೊಂದಿಗೆ ಪೂಜಾ ಕಾರ್ಯಕ್ರಮ ಆರಂಭವಾದವು. ನಂತರ ಸಾಮೂಹಿಕ ನಾಗರಪೂಜೆ, ವೀರಲಕ್ಕಮ್ಮದೇವಿ, ರೇವಣಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಮುದ್ದುಲಿಂಗೇಶ್ವರ, ಶಿರುವಾಳ ಬೀರಲಿಂಗೇಶ್ವರ ಪುರಪ್ರವೇಶವಾಯಿತು.

ADVERTISEMENT

ಚಂದ್ರಗುತ್ತಿ ಯಲ್ಲಮ್ಮದೇವಿ, ಆದ್ವಾನಿ ಯಲ್ಲಮ್ಮದೇವಿ ಹಾಗೂ ಚೌಡಿಕೆ ಯಲ್ಲಮ್ಮದೇವಿ ಮೆರವಣಿಗೆ ಅದ್ದೂರಿಯಾಗಿ ನಡೆಸಲಾಯಿತು. ಸೋಮವಾರ ಚಂದ್ರಗುತ್ತಿ ಯಲ್ಲಮ್ಮದೇವಿ ಸನ್ನಿಧಿಯಲ್ಲಿ ಹೋಮ, ವಿಶೇಷ ಪೂಜೆ ಬಳಿಕ ಎಲ್ಲ ದೇವರುಗಳ ಗಂಗಾಪೂಜೆ ನೆರವೇರಿಸಲಾಯಿತು.

ಶರಣಪ್ಪ ಒಡೆಯರ್ ನೇತೃತ್ವದಲ್ಲಿ ಚಂದ್ರಗುತ್ತಿ ಎಲ್ಲಮ್ಮ ದೇವಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸಿ.ಎಂ.ಶಂಭು, ಸಿ.ಟಿ ಮುದ್ದುಕುಮಾರ್, ಡಾ.ಸಿ.ಎಸ್. ಸುಶ್ರುತ್, ಸಿ.ಗುರುಮೂರ್ತಿ, ಸಿ.ಡಿ. ಚಂದ್ರಶೇಖರ್, ಸಿ.ಕೆ. ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.

ಮಂಗಳವಾರ ಮೆರವಣಿಗೆ ಮೂಲಕ ಎಲ್ಲ ದೇವರ ನೂತನ ದೇವಾಲಯ ಪ್ರವೇಶ ಮಾಡಿದವು. ತೀರ್ಥಾಭಿಷೇಕ, ಮೂಲವಿಗ್ರಹ, ಕಳಶ, ತ್ರಿಶೂಲ ಪ್ರತಿಷ್ಠಾಪನೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಓಕಳಿ ಉತ್ಸವ ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.