ADVERTISEMENT

ಆನ್‌ಲೈನ್‌ ಟ್ರೇಡಿಂಗ್‌: ಗೃಹಿಣಿಗೆ ₹12 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 5:15 IST
Last Updated 23 ಅಕ್ಟೋಬರ್ 2024, 5:15 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ತುಮಕೂರು: ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ನಗರದ ಗೋಕುಲ ಬಡಾವಣೆಯ ಸಿ.ದಿವ್ಯಾ ಎಂಬುವರು ₹12.29 ಲಕ್ಷ ಕಳೆದುಕೊಂಡಿದ್ದಾರೆ.

ದಿವ್ಯಾ ಪಾರ್ಟ್‌ ಟೈಮ್‌ ಕೆಲಸಕ್ಕಾಗಿ ‘ನೌಕರಿ.ಕಾಮ್‌’ನಲ್ಲಿ ರೆಸ್ಯೂಮ್‌ ಅಪ್‌ಲೋಡ್‌ ಮಾಡಿದ್ದು, ಸೆ. 1ರಂದು ಅಪರಿಚಿತರು ಟೆಲಿಗ್ರಾಮ್‌ನಲ್ಲಿ ‘ಹಾದಿಯಾ’ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾರೆ. ಆ್ಯಪ್‌ಗಳಿಗೆ ರಿವೀವ್‌ ನೀಡಿದರೆ ಕಮಿಷನ್‌ ನೀಡಲಾಗುವುದು ಎಂದು ತಿಳಿಸಿದ್ದಾರೆ. ನಂತರ ‘45055 ಪರ್ಥ್‌ಮಿಂಟ್‌’ ಎಂಬ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ಆನ್‌ಲೈನ್‌ ಟ್ರೇಡಿಂಗ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೆಚ್ಚಿನ ಲಾಭ ಗಳಿಸಬಹುದು ಎಂದು ಆಮಿಷ ಒಡ್ಡಿದ್ದಾರೆ.

ಹಣ ಹೂಡಿಕೆ ಮಾಡಲು ದಿವ್ಯಾ ಒಪ್ಪಿದಾಗ ಸೈಬರ್‌ ವಂಚಕರು ವಿವಿಧ ಬ್ಯಾಂಕ್‌ ಖಾತೆ, ಯುಪಿಐ ಐ.ಡಿಗಳನ್ನು ಕಳುಹಿಸಿದ್ದಾರೆ. ಸೆ. 1ರಿಂದ ಅ. 18ರ ವರೆಗೆ ಹಂತ ಹಂತವಾಗಿ ಒಟ್ಟು ₹12,84,071 ಹಣ ವರ್ಗಾಯಿಸಿದ್ದಾರೆ. ಇದರಲ್ಲಿ ಅವರ ಖಾತೆಗೆ ₹54,314 ವಾಪಸ್‌ ಹಾಕಿದ್ದಾರೆ. ಹೂಡಿಕೆ ಮಾಡಿದ ಹಣ ಹಿಂದಿರುಗಿಸುವಂತೆ ಗ್ರೂಪ್‌ನಲ್ಲಿ ಮೆಸೇಜ್‌ ಮಾಡಿದ್ದು, ಯಾರೊಬ್ಬರು ಪ್ರತಿಕ್ರಿಯಿಸಿಲ್ಲ. ಇದರಿಂದ ಅನುಮಾನಗೊಂಡು ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.