ಕುಣಿಗಲ್: ಪಟ್ಟಣದ ಜ್ಞಾನಭಾರತಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಮಕ್ಕಳ ಅಧ್ಯಕ್ಷತೆಯಲ್ಲಿ, ಮಕ್ಕಳೇ ಉದ್ಘಾಟನೆ ಮತ್ತು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಶಿಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ರಂಜಿಸಿದರು.
ವಿದ್ಯಾರ್ಥಿ ರಕ್ಷಿತಾ ಅಧ್ಯಕ್ಷತೆ ವಹಿಸಿದ್ದು, ಗೀತಾಂಜಲಿ ಉದ್ಘಾಟಿಸಿದರು. ಸುಧಾ ಬಹುಮಾನ ವಿತರಣೆ ಮಾಡಿದ್ದು, ಎಲ್‌ಕೆಜಿಯಿಂದ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಸ್ಥೆ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ, ಸ್ವಾತಂತ್ರ ನಂತರ ದೇಶದ ಪ್ರಥಮ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ನೆಹರೂ ಸ್ವಾತಂತ್ರ ಭಾರತದ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ದೇಶದ ಪ್ರಗತಿಗೆ ಶ್ರಮಿಸಿದರು. ಮಕ್ಕಳೊಡನೆ ಬೆರತು ‘ಚಾ ಚಾ ನೆಹರು’ ಎಂದು ಕರೆಸಿಕೊಂಡರು ಎಂದರು.
ಪ್ರಾಂಶುಪಾಲ ಗೋವಿಂದೆಗೌಡ, ಮುಖ್ಯಶಿಕ್ಷಕರಾದ ಕೆ.ಜಿ.ಪ್ರಕಾಶ ಮೂರ್ತಿ, ಗಂಗಮ್ಮ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಪನಿಪಾಳ್ಯ ರಮೇಶ ಮತ್ತು ತಾಲ್ಲೂಕು ಒಕ್ಕಲಿಗ ಸಂಘದ ನಿರ್ದೇಶಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.