ADVERTISEMENT

ಗುಬ್ಬಿ | ರೈಲ್ವೆ ಗೇಟ್‌ಗೆ ಡಿಕ್ಕಿ: ಬೈಕ್‌ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 7:59 IST
Last Updated 29 ಫೆಬ್ರುವರಿ 2024, 7:59 IST

ಗುಬ್ಬಿ: ತಾಲ್ಲೂಕಿನ ನಿಟ್ಟೂರು- ಗುಬ್ಬಿ ಮಧ್ಯೆ ಬೆಣಚಿಗೆರೆ ರೈಲ್ವೆ ಕ್ರಾಸ್‌ನಲ್ಲಿ ಬುಧವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 73ರಿಂದ ಬೆಣಚಿಗೆರೆಗೆ ವೇಗವಾಗಿ ಹೋಗುತ್ತಿದ್ದ ಬೈಕ್‌ ಮುಚ್ಚಿದ್ದ ರೈಲ್ವೆ ಗೇಟ್‌ಗೆ ಡಿಕ್ಕಿಹೊಡೆದ ಪರಿಣಾಮ ಒಬ್ಬ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಮತ್ತೊಬ್ಬ ಸವಾರ ಬೈಕಿನಲ್ಲಿಯೇ ಹೆದ್ದಾರಿಗೆ ಮರಳಿ ಪತ್ರೆ ಮತ್ತಿಘಟ್ಟದ ಬಳಿ ಬೈಕ್‌ ನಿಲ್ಲಿಸಿ ಪರಾರಿಯಾಗಿದ್ದಾನೆ.

ಬೈಕ್ ಸವಾರರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.