ಮಧುಗಿರಿ: ಶಿಕ್ಷಣವನ್ನು ಸಾಧನವನ್ನಾಗಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಎಂ.ವಿ. ವೀರಭದ್ರಯ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ರೋಟರಿ ಸಂಸ್ಥೆ ನೀಡಿರುವ 30 ಕಂಪ್ಯೂಟರ್ ವಿತರಿಸಿ ಅವರು ಮಾತನಾಡಿದರು.
ವಿಶ್ವದ ಎಲ್ಲ ವಿದ್ಯಮಾನಗಳು ಮೊಬೈಲ್‍ನಲ್ಲಿ ಲಭ್ಯವಿದ್ದು, ಕಲಿಕೆಗೆ ಅನುಕೂಲಕರ ವಾತಾವರಣವಿದೆ. ಉನ್ನತ ಶಿಕ್ಷಣ ಪಡೆದರೆ ಅವಕಾಶ ಮನೆ ಬಾಗಿಲಿಗೆ ಬರುತ್ತದೆ ಎಂದರು.
ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ವಿದ್ಯಾರ್ಥಿಗಳ ಜೊತೆಗಿದ್ದು, ಅನೇಕ ಸೌಲಭ್ಯ ಒದಗಿಸುತ್ತಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುತ್ತಿವೆ. ಪೋಷಕರ ಆಸೆ ಈಡೇರಿಸಲು ಪರಿಶ್ರಮದಿಂದ ಶಿಕ್ಷಣ ಪಡೆಯಬೇಕು ಎಂದು
ತಿಳಿಸಿದರು.
ರೋಟರಿ ಅಧ್ಯಕ್ಷ ಜಿ. ಜಯರಾಮಯ್ಯ, ಪ್ರಾಂಶುಪಾಲ ಮುನೀಂದ್ರ ಕುಮಾರ್ ಮಾತನಾಡಿದರು. ಪ್ರಾಂಶುಪಾಲ ಟಿ.ಎನ್. ನರಸಿಂಹಮೂರ್ತಿ, ರಾಧಾಕೃಷ್ಣ, ರೋಟರಿ ಉಪಾಧ್ಯಕ್ಷ ವೆಂಕಟೇಶ್ ಪೂಲು, ಕಾರ್ಯದರ್ಶಿ ಎಂ.ಈ. ಕರಿಯಣ್ಣ, ಸಹ ಕಾರ್ಯದರ್ಶಿ ಎಂ.ಎನ್. ನಟರಾಜು, ಖಜಾಂಚಿ ಎಂ. ವೆಂಕಟರಾಮು, ಎಂ.ಎಲ್. ಗಂಗರಾಜು, ಕೆ. ನಾರಾಯಣ್, ಎಂ.ಎಸ್. ಚಂದ್ರಶೇಖರ್ ಬಾಬು, ನರಸಿಂಹಮೂರ್ತಿಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.