ADVERTISEMENT

ತಿಪಟೂರು | ರಾತ್ರಿಯಿಡಿ ಕಾದು ಕುಳಿದು ಕೊಬ್ಬರಿ ನೋಂದಣಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 4:19 IST
Last Updated 5 ಮಾರ್ಚ್ 2024, 4:19 IST
<div class="paragraphs"><p>ತಿಪಟೂರಿನಲ್ಲಿ ಕೊಬ್ಬರಿ ನೋಂದಣಿಗೆ ಸರದಿ ಸಾಲಿನಲ್ಲಿ ಕಾದು ಕುಳಿತಿದ್ದ ರೈತರು</p></div>

ತಿಪಟೂರಿನಲ್ಲಿ ಕೊಬ್ಬರಿ ನೋಂದಣಿಗೆ ಸರದಿ ಸಾಲಿನಲ್ಲಿ ಕಾದು ಕುಳಿತಿದ್ದ ರೈತರು

   

ತಿಪಟೂರು: ಕನಿಷ್ಠ ಬೆಂಬಲ ಯೋಜನೆಯಡಿ ಕೇಂದ್ರ ಸರ್ಕಾರವೂ ನಿಗದಿಪಡಿಸಿರುವ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು ರೈತರು ಕೊಂಚ ನಿರಾಳಗೊಂಡಿದ್ದಾರೆ.

ಗುಣಮಟ್ಟದ ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಲ್‍ಗೆ ₹12 ಸಾವಿರದಂತೆ ಗರಿಷ್ಠ 69,250 ಮೆಟ್ರಿಕ್ ಟನ್ ಉಂಡೆ ಕೊಬ್ಬರಿಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಯ ಅನ್ವಯ ರೈತರಿಂದ ಖರೀದಿಸಲು ಆದೇಶ ನೀಡಲಾಗಿತ್ತು. ಭಾನುವಾರ ಮಧ್ಯಾಹ್ನದಿಂದ ರಾತ್ರಿಯಿಡಿ ಸಾವಿರಾರು ಮಂದಿ ಸರದಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿಕೊಂಡಿದ್ದಾರೆ.

ADVERTISEMENT

ಸೋಮವಾರ ಬೆಳಿಗ್ಗೆ ಪ್ರಾರಂಭದಲ್ಲಿ ಕೆಲಕಾಲ ಸರ್ವರ್ ಸಮಸ್ಯೆ ಎದುರಾದರೂ ನಂತರ ಪ್ರಕ್ರಿಯೆ ಸುಗಮವಾಗಿ ನಡೆಯಿತು. ಸರದಿ ಸಾಲಿನಲ್ಲಿ ನಿಂತಿದ್ದ ರೈತರಲ್ಲಿ ಕೆಲಕಾಲ ನೂಕಾಟ, ತಳ್ಳಾಟ ನಡೆಯಿತು. ರೈತರೇ ಸರದಿ ಸಾಲು ಮಾಡಿಕೊಂಡು ಟೋಕನ್ ನೀಡಿ ವ್ಯವಸ್ಥಿತವಾಗಿ ನೋಂದಣಿ ಮಾಡಿದ್ದಾರೆ.

ತಿಪಟೂರುಎಪಿಎಂಸಿಯಲ್ಲಿ 4 ಕಡೆಗಳಲ್ಲಿ ನೋಂದಣಿ ಮಾಡುತ್ತಿದ್ದು ಒಂದು ನೋಂದಣಿ ಮಹಿಳೆಯರಿಗೆ ಸೀಮಿತವಾಗಿತ್ತು. ಉಳಿದಂತೆ ಕಿಬ್ಬನಹಳ್ಳಿ, ಕರಡಾಳುಎಪಿಎಂಸಿ, ಕೊನೆಹಳ್ಳಿ ಎಪಿಎಂಸಿಯಲ್ಲಿ ಒಟ್ಟು 7 ಕಡೆಗಳಲ್ಲಿ ನೋಂದಣಿ ಮಾಡಿದ್ದಾರೆ. ರೈತರ ಸಂಖ್ಯೆ ಹೆಚ್ಚಾಗುತ್ತಿದ್ದು ಹೆಚ್ಚುವರಿ ಕೌಂಟರ್ ತೆರೆಯಲು ಮನವಿ ಸಲ್ಲಿಸಿದ್ದು ಮಂಗಳವಾರ ಹೆಚ್ಚುವರಿ ಕೌಂಟರ್ ದೊರೆಯುವ ಸಾಧ್ಯತೆ ಇದೆ. ಸಂಜೆ 6 ಗಂಟೆಯಾದರೂ ಸಾವಿರಾರು ಮಂದಿ ರೈತರು ಮಂಗಳವಾರದ ನೋಂದಣಿಗೆ ಕಾದು ಕುಳಿತಿದ್ದರು.

ಭಾನುವಾರ ರಾತ್ರಿ ನಿದ್ದೆ ಮಾಡದೇ ಸರದಿ ಸಾಲಿನಲ್ಲಿ ನಿಂತಿದ್ದೆವು. ಸೋಮವಾರ ಮಧ್ಯಾಹ್ನ ನೋಂದಣಿಯಾಗಿದೆ ಎನ್ನುತ್ತಾರೆ ಹೊಸಹಳ್ಳಿ ಗ್ರಾಮದ ರೈತ ಬಿ.ರವೀಂದ್ರ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.