ADVERTISEMENT

ತುಮಕೂರು: ಕೊರೊನಾ ಸೋಂಕು ನಿವಾರಣೆಗೆ ಮಸೀದಿಗಳಲ್ಲಿ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 5:09 IST
Last Updated 1 ಆಗಸ್ಟ್ 2020, 5:09 IST
ಈದ್‌ ಪ್ರಯುಕ್ತ ಪ್ರಾರ್ಥನೆಗೆ ಸೇರಿರುವ ಮುಸ್ಲಿಮರು
ಈದ್‌ ಪ್ರಯುಕ್ತ ಪ್ರಾರ್ಥನೆಗೆ ಸೇರಿರುವ ಮುಸ್ಲಿಮರು   

ತುಮಕೂರು: ಬಕ್ರೀದ್ ಅಂಗವಾಗಿ ನಗರದ ಬಾರ್ ಲೈನ್ ರಸ್ತೆ, ಜಾಮಿಯಾ ಮಸೀದಿ, ಎನ್.ಆರ್.ಕಾಲೊನಿ, ಪಿ.ಎಚ್.ಕಾಲೊನಿ, ಯಾರಬ್ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿರುವ ಮಸೀದಿಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.

ಕೊರೊನಾ ಕಾರಣದಿಂದ ಮಸೀದಿಗಳಿಗೆ ಬರುವವರ ಸಂಖ್ಯೆ ಸಹ ಕಡಿಮೆ ಇತ್ತು.

ಬಾರ್ ಲೈನ್ ರಸ್ತೆಯಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಷಫಿ ಅಹಮದ್, ಜಿಲ್ಲೆಯಾದ್ಯಂತ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಹಬ್ಬ ಆಚರಿಸುತ್ತಿದ್ದೇವೆ. ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ ಮಸೀದಿಗಳಿಗೆ ಬಂದಿದ್ದೇವೆ. ಕೊರೊನಾ ಸೋಂಕು ನಿವಾರಣೆ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

ADVERTISEMENT

ಪ್ರಾರ್ಥನೆಗೆ ಹೆಚ್ಚು ಜನರು ಸೇರಿದರೆ ತಲಾ 50 ಮಂದಿಯ ತಂಡದಂತೆ ಪ್ರಾರ್ಥನೆ ಸಲ್ಲಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.