ಪಾವಗಡ: ಭಾರತ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎನ್ನುವ ಕನಸನ್ನು ನನಸು ಮಾಡಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಪ್ರಾಂಶುಪಾಲ ರಾಮಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಭ್ರಷ್ಟಾಚಾರ ಮುಕ್ತ ಸಪ್ತಾಹದಲ್ಲಿ ಅವರು ಮಾತನಾಡಿದರು.
ಪ್ರಾಮಾಣಿಕನಾಗಿರುವುದರ ಜೊತೆಗೆ ಇತರರನ್ನು ಪ್ರಾಮಾಣಿಕರನ್ನಾಗಿ ರೂಪಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ. ಅಪ್ರಾಮಾಣಿಕ, ಅಧಕ್ಷರನ್ನು ನೋಡಿಯು ಸುಮ್ಮನಿರುವುದು ಪಲಾಯನ ಅಥವಾ ಜಾಣ ಕುರುಡು ಆಗುತ್ತದೆ. ಭ್ರಷ್ಟಾಚಾರವು ದೇಶದ ಒಂದು ದೊಡ್ಡ ಪಿಡುಗು ಎಂದರು.
ಉಪನ್ಯಾಸಕ ಎಚ್. ರಘುವೀರಪ್ಪ ಮಾತನಾಡಿ, ಭ್ರಷ್ಟಾಚಾರ ದೇಶವನ್ನು ಮಾತ್ರವಲ್ಲದೆ ವಿಶ್ವವನ್ನೇ ಕಾಡುತ್ತಿದೆ. ಮಾನವನ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಆಳವಾಗಿ ಬೇರೂರಿದೆ. ಇದು ಒಬ್ಬ ವ್ಯಕ್ತಿಗೆ ಸೀಮಿತವಾಗಿರದೆ ಅವನಿಂದ ದೇಶ ಮತ್ತು ವಿಶ್ವವನ್ನೇ ವ್ಯಾಪಿಸಿದೆ. ಎಲ್ಲಡೆ ವ್ಯಾಪಕವಾಗಿರುವ ಭ್ರಷ್ಟಾಚಾರ ನಿರ್ಮೂಲನೆಗೆ ವಿದ್ಯಾರ್ಥಿ ದಿಸೆಯಿಂದಲೇ ಶ್ರಮಿಸಬೇಕು ಎಂದರು.
ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.