ADVERTISEMENT

ಅಪಘಾತದಲ್ಲಿ ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 10:44 IST
Last Updated 20 ಅಕ್ಟೋಬರ್ 2024, 10:44 IST

ಹುಳಿಯಾರು: ಸಮೀಪದ ಮತಿಘಟ್ಟ ಬಳಿಯ ಸಾಲುಮರಪಾಳ್ಯ ಗೇಟ್ ನಲ್ಲಿ ಭಾನುವಾರ ಬೈಕ್-ಲಾರಿ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭರಣಾಪುರ ಗ್ರಾಮದ ಗೋಪಿನಾಥ್(45), ಪುಷ್ಪಾವತಿ(40) ಮೃತರು. ಮತಿಘಟ್ಟ ಗ್ರಾಮಕ್ಕೆ ಬಂದು ವಾಪಸ್ ಹೋಗುವಾಗ ಘಟನೆ ಸಂಭವಿಸಿದೆ. ಹಂದನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT