ತುಮಕೂರು: ದಸರಾ ಪ್ರಯುಕ್ತ ನಗರದ ರಾಜ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದು, ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ನಗರದ ಬಟವಾಡಿ ವೃತ್ತದಿಂದ ಎಸ್.ಎಸ್.ವೃತ್ತ, ಭದ್ರಮ್ಮ ಛತ್ರ ವೃತ್ತ, ಬಿಜಿಎಸ್ ವೃತ್ತ, ಕಾಲ್‌ಟ್ಯಾಕ್ಸ್ ವೃತ್ತ ಹಾಗೂ ಗುಬ್ಬಿ ವೃತ್ತದ ವರೆಗೆ, ಶಿರಾ ಗೇಟ್‌ನಿಂದ ಮರಳೂರು ದಿಣ್ಣೆ ವೃತ್ತದ ವರೆಗಿನ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಎಂ.ಜಿ.ರಸ್ತೆ, ಜಿಲ್ಲಾ ಕ್ರೀಡಾಂಗಣದ ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಿಗೆ ದೀಪಾಲಂಕಾರ ಮಾಡಲಾಗಿದೆ.
ಚಾಮುಂಡಿ ದೇವಿ, ಕೃಷ್ಣ, ಲಕ್ಷ್ಮಿ ಸೇರಿದಂತೆ ವಿವಿಧ ಕಲಾಕೃತಿಗಳು ವಿದ್ಯುತ್ ದೀಪದಲ್ಲಿ ಮೂಡಿ ಬಂದಿವೆ. ವಿದ್ಯುದ್ದೀಪಾಲಂಕಾರ ದಸರಾ ಮೆರುಗು ಹೆಚ್ಚಿಸಿದೆ. ಸರ್ಕಾರಿ ಕಚೇರಿಗಳು, ಪ್ರಮುಖ ವೃತ್ತಗಳಲ್ಲೂ ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ.
ಇದೇ ಮೊದಲ ಬಾರಿಗೆ ಜಿಲ್ಲಾ ಆಡಳಿತದಿಂದ ದಸರಾ ಆಚರಣೆ ಮಾಡುತ್ತಿದ್ದು, ಮೈಸೂರಿನ ದಸರಾ ಮಾದರಿಯನ್ನು ಅನುಸರಿಸಲಾಗುತ್ತಿದೆ. ಅಲ್ಲಿ ದಸರಾ ಸಮಯದಲ್ಲಿ ವಿದ್ಯುತ್ ದೀಪಾಲಂಕಾರ ಆಕರ್ಷಕವಾಗಿರುತ್ತದೆ. ನಗರದಲ್ಲೂ ಅದೇ ರೀತಿಯಲ್ಲಿ ದೀಪಾಲಂಕಾರ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.