ADVERTISEMENT

‘ನಮ್ಮ ಮೆಟ್ರೊ’ಗೆ ಕೆಂಪೇಗೌಡರ ಹೆಸರಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 14:40 IST
Last Updated 15 ಜನವರಿ 2024, 14:40 IST
ಪಟ್ಟನಾಯಕನಹಳ್ಳಿ ಮಠದ ಆವರಣದಲ್ಲಿ ಕೆಂಪೇಗೌಡರ ರಾಜ್ಯ ಸಂಸ್ಥಾಪನ ದಿನ ಆಚರಿಸಲಾಯಿತು. ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಪಾಲ್ಗೊಂಡಿದ್ದರು
ಪಟ್ಟನಾಯಕನಹಳ್ಳಿ ಮಠದ ಆವರಣದಲ್ಲಿ ಕೆಂಪೇಗೌಡರ ರಾಜ್ಯ ಸಂಸ್ಥಾಪನ ದಿನ ಆಚರಿಸಲಾಯಿತು. ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಪಾಲ್ಗೊಂಡಿದ್ದರು   

ಪಟ್ಟನಾಯಕನಹಳ್ಳಿ: ನಾಡಪ್ರಭು ಕೆಂಪೇಗೌಡರ ಸಾಮ್ರಾಜ್ಯ ಸಂಸ್ಥಾಪನಾ ದಿನವನ್ನು ಬೆಂಗಳೂರು ಹಬ್ಬವಾಗಿ ಆಚರಿಸಬೇಕು. ನಮ್ಮ ಮೆಟ್ರೊಗೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು ಎಂದು ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.

ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನ ಮಠದಲ್ಲಿ ಸೋಮವಾರ ನಡೆದ ಕೆಂಪೇಗೌಡರ ಸಾಮ್ರಾಜ್ಯ ಸಂಸ್ಥಾಪನ ದಿನ ಹಾಗೂ ಸಂಕ್ರಾಂತಿ ಹಬ್ಬ ಉದ್ಘಾಟಿಸಿ ಮಾತನಾಡಿದರು.

ಪ್ರಸಕ್ತ ಸ್ಥಿತಿಯಲ್ಲಿ ರೈತ ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ. ಆದರೆ ಕೆಂಪೇಗೌಡರ ಆಡಳಿತದಲ್ಲಿ ಸಣ್ಣ,ಸಣ್ಣ ಸಮುದಾಯದ ಗುಡಿ ಕೈಗಾರಿಕೆ ವಸ್ತುಗಳು ಹಾಗೂ ಬೆಳೆಗಳಿಗೆ 64 ಪೇಟೆ ನಿರ್ಮಿಸಿ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೂಡಿಸಲಾಗಿತ್ತು ಎಂದರು.

ADVERTISEMENT

ಸಮಾನತವಾದಿ ಕೆಂಪೇಗೌಡರ ಜೀವನ ಚರಿತ್ರೆಯನ್ನು ಎಲ್‌ಕೆಜಿಯಿಂದ ಪದವಿವರೆಗೆ ಪಠ್ಯಪುಸ್ತಕಗಳಲ್ಲಿ ಕೆಂಪೇಗೌಡರ ಜೀವನ ಚರಿತ್ರೆಯನ್ನು ಪಠ್ಯ ರೂಪದಲ್ಲಿ ಬೋಧಿಸಿ ಕೆಂಪೇಗೌಡರ ಆದರ್ಶ ಗುಣಗಳನ್ನು ಯುವ ಪೀಳಿಗೆ ಮಾದರಿಯಾಗಿ ಸ್ವೀಕರಿಸಲು ಸಹಕಾರಿಯಾಗುವಂತೆ ಪಠ್ಯಪುಸ್ತಕಗಳಲ್ಲಿ ಕೆಂಪೇಗೌಡರ ಜೀವನ ಚರಿತ್ರೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಮುದ್ರಿಸಬೇಕು ಎಂದರು.

ನಾದೂರು ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ಮಂಜುನಾಥ ಸ್ವಾಮಿ, ಮುಖಂಡರಾದ ತಮ್ಮಣ್ಣ, ನಿರಂಜನ, ಆರ್.ಕೆ. ಮಾರುತಿ, ನಾಗರಾಜು, ಮಂಜುನಾಥ ಗುಪ್ತ, ಶಿವಣ್ಣ, ಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.