ADVERTISEMENT

ದಸರಾ ರಜೆ ಕಡಿತ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 3:53 IST
Last Updated 8 ಅಕ್ಟೋಬರ್ 2024, 3:53 IST
ಪಾವಗಡ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ಅವರಿಗೆ ಸೋಮವಾರ ಶ್ರೀರಾಮಸೇನೆ ಪದಾದಿಕಾರಿಗಳು ದಸರಾ ರಜೆ ಕಡಿತಗೊಳಿಸಿ ಶಾಲೆ ನಡೆಸುತ್ತಿರುವ ಶಾಲೆಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮನವಿ ನೀಡಿದರು
ಪಾವಗಡ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ಅವರಿಗೆ ಸೋಮವಾರ ಶ್ರೀರಾಮಸೇನೆ ಪದಾದಿಕಾರಿಗಳು ದಸರಾ ರಜೆ ಕಡಿತಗೊಳಿಸಿ ಶಾಲೆ ನಡೆಸುತ್ತಿರುವ ಶಾಲೆಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮನವಿ ನೀಡಿದರು   

ಪಾವಗಡ: ದಸರಾ ಹಬ್ಬದ ರಜೆಗಳನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ, ತಾಲ್ಲೂಕು ಕಚೇರಿ ಅಧಿಕಾರಿಗಳಿಗೆ ಶ್ರೀರಾಮ ಸೇನೆ ಪದಾಧಿಕಾರಿಗಳು ಮನವಿ ನೀಡಿದರು.

ದಸರಾ ಹಬ್ಬದ ರಜೆ ನೀಡದೆ ತಾಲ್ಲೂಕಿನ ಬಹುತೇಕ ಶಾಲೆಗಳು ತರಗತಿ, ಪರೀಕ್ಷೆ ನಡೆಸುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.

ಹಲ ದಶಕಗಳಿಂದ ಪ್ರಾಥಮಿಕ, ಪ್ರೌಢಶಾಲೆಗಳಿಗೆ ದಸರಾ ರಜೆ ನೀಡುವುದು ಸಂಪ್ರದಾಯ. ಇತ್ತೀಚೆಗೆ ಉದ್ದೇಶಪೂರ್ವಕವಾಗಿ ತಡೆಯುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ದೂರಿದರು.

ADVERTISEMENT

ಶಾಲೆಗಳಿಗೆ ಕಟ್ಟುನಿಟ್ಟಿನ ರಜೆ ಘೋಷಣೆ ಮಾಡಬೇಕು. ಬೇಡಿಕೆ ಈಡೇರಿಸದಿದ್ದಲ್ಲಿ ಶಾಲೆಗೆ ಬೀಗಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಅನಿಲ್ ಯಾದವ್, ರಾಮು, ಜಿತೇಂದ್ರ ಬಾಬು, ರಾಮಾಂಜಿ, ಅಲಕುಂದಿ ರಾಜ್, ತಿರುಮಲೇಶ್, ಮಾರುತಿ, ಸ್ವರೂಪ, ನಿತಿನ್, ನಾಗೇಂದ್ರಯ್ಯ, ರಾಜಕುಮಾರ್, ರಾಮಪ್ಪ, ನಾಗರಾಜು, ಉಮೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.