ಮಧುಗಿರಿ: ‘ರಾಜ್ಯ ಬಿಜೆಪಿ ಸರ್ಕಾರ ಕೊರವಂಜಿ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಏಕಲವ್ಯ ಒತ್ತಾಯಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅಖಿಲ ಕರ್ನಾಟಕ ಕುಳವ ಮಹಾ ಸಂಘದ ಒಕ್ಕೂಟ ಹಾಗೂ ತಾಲ್ಲೂಕು ನೂತನ ಘಟಕ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಜನಾಂಗಕ್ಕೆ ಕುಳವ, ಕೊರಮ, ಕೊರಚ, ಕುರುವನ್, ಎರಕಲು, ಕೈಕಾಡಿ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿದೆ. ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿವರೆಗೂ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳು ಮರೀಚಿಕೆಯಾಗಿದೆ. ಆದ್ದರಿಂದ ಕುಳವ ಜನಾಂಗಕ್ಕೆ ಪ್ರತ್ಯೇಕ ನಿಗಮ ಮಾಡಬೇಕೆಂದು ಆಗ್ರಹಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಈಶ್ವರಯ್ಯ, ಗೌರವಾಧ್ಯಕ್ಷ
ರಾಗಿ ಜಗದೀಶ್, ಕಾರ್ಯದರ್ಶಿಯಾಗಿ ರಮೇಶ್, ಉಪಾಧ್ಯಕ್ಷರಾಗಿ ಗುರುಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಘಟಕ ಅಧ್ಯಕ್ಷ ಆನಂದಪ್ಪ, ಮುಖಂಡ ಹುಬ್ಬಳ್ಳಿ ಸೋಮಶೇಖರ್ ಸೌದತ್ತಿ, ಶಿವರಾಮ, ಈಶ್ವರಯ್ಯ, ನಾರಾಯಣಪ್ಪ, ಬಿ.ಎನ್.ಜಗದೀಶ್, ಬಿ.ವಿ.ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.