ಕೊರಟಗೆರೆ: ಸವಿತಾ ಸಮಾಜದ ಜಾತಿ ನಿಂದನೆ ತಡೆ ಕಾಯ್ದೆ ಮತ್ತು ಪ್ರತ್ಯೇಕ ಮೀಸಲಾತಿ ಜಾರಿಗೆ ಆಗ್ರಹಿಸಿ ಸಮುದಾಯದ ಮುಖಂಡರು ಪಟ್ಟಣದಲ್ಲಿ ಮಂಗಳವಾರ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಸವಿತಾ ಸಮಾಜವು ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಇದರ ಜತೆಗೆ ಜಾತಿ ತಾರತಮ್ಯದಿಂದ ಸಮುದಾಯದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸವಿತಾ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಸ್.ಗಂಗರಾಜು ಹೇಳಿದರು.
ಸವಿತಾ ಸಮಾಜ ಮತ್ತು ಕ್ಷೌರಿಕ ವೃತ್ತಿಯನ್ನು ಸಿನಿಮಾ, ನಾಟಕಗಳಲ್ಲಿ ಆಡು ಭಾಷೆ ಮತ್ತು ಹಾಸ್ಯಗಳಲ್ಲಿ ನಿಂದಿಸಿ ನಮಗೆ ಅವಮಾನ ಮಾಡುತ್ತಿದ್ದಾರೆ. ಇದಕ್ಕೆ ಕಾನೂನಿನ ಮೂಲಕ ಕಡಿವಾಣ ಹಾಕಬೇಕು. ಕಾಂಗ್ರೆಸ್ ಮುಖಂಡರು ಚುನಾವಣೆಗೂ ಮುನ್ನ ಈ ಬಾರಿ ಅಧಿಕಾರಕ್ಕೆ ಬಂದರೆ ಸವಿತಾ ಸಮಾಜಕ್ಕೆ ಜಾತಿ ನಿಂದನೆ ತಡೆ ಕಾಯ್ದೆ ಮತ್ತು ವಿಶೇಷ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಈಗ ನುಡಿದಂತೆ ನಡೆಯಬೇಕು ಎಂದು ಒತ್ತಾಯಿಸಿದರು.
ಕಾರ್ಯಾಧ್ಯಕ್ಷ ಗೌರಿಶಂಕರ್, ಪದಾಧಿಕಾರಿಗಳಾದ ರಾಘವೇಂದ್ರ, ರವಿಚಂದ್ರ, ಜಯರಾಂ, ರವಿಕುಮಾರ್, ನಟರಾಜು, ತ್ರಿಭುವನ್, ವೇಣು, ಉಮೇಶ್ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.