ADVERTISEMENT

ಅಪರೂಪದ ವ್ಯಕ್ತಿ ಧ್ರುವನಾರಾಯಣ: ಶಾಸಕ ಡಾ.ಜಿ.ಪರಮೇಶ್ವರ

ಧ್ರುವನಾರಾಯಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 15:40 IST
Last Updated 11 ಮಾರ್ಚ್ 2023, 15:40 IST
ತುಮಕೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಶಾಸಕ ಡಾ.ಜಿ.ಪರಮೇಶ್ವರ ಪುಷ್ಪ ನಮನ ಸಲ್ಲಿಸಿದರು. ಚಂದ್ರಶೇಖರಗೌಡ, ಎಸ್.ಷಫಿ ಅಹ್ಮದ್‌, ಕೆ.ಎಸ್. ಕಿರಣ್‍ಕುಮಾರ್, ರಫೀಕ್ ಅಹ್ಮದ್‌ ಇದ್ದರು
ತುಮಕೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಶಾಸಕ ಡಾ.ಜಿ.ಪರಮೇಶ್ವರ ಪುಷ್ಪ ನಮನ ಸಲ್ಲಿಸಿದರು. ಚಂದ್ರಶೇಖರಗೌಡ, ಎಸ್.ಷಫಿ ಅಹ್ಮದ್‌, ಕೆ.ಎಸ್. ಕಿರಣ್‍ಕುಮಾರ್, ರಫೀಕ್ ಅಹ್ಮದ್‌ ಇದ್ದರು   

ತುಮಕೂರು: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ಬಹಳ ಅಪರೂಪದ ವ್ಯಕ್ತಿತ್ವವುಳ್ಳವರು. ಅವರ ನಿಧನ ಕಾಂಗ್ರೆಸ್‌ ಹಾಗೂ ರಾಜಕೀಯ ಕ್ಷೇತ್ರಕ್ಕಾದ ನಷ್ಟ ಎಂದು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆರ್‌.ಧ್ರುವನಾರಾಯಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಧ್ರುವನಾರಾಯಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ವಿದ್ಯಾರ್ಥಿ ದೆಸೆಯಿಂದಲೂ ಕಾಂಗ್ರೆಸ್‌ ಕಟ್ಟಾಳಾಗಿ ಕಾರ್ಯನಿರ್ವಹಿಸಿದ್ದರು. 2 ಬಾರಿ ಸಂಸದರಾಗಿ, ಶಾಸಕರಾಗಿ ಆಯ್ಕೆಯಾಗಿದ್ದರು. ಇವರ ಕೆಲಸದ ಪರಿ ಹಾಗೂ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದ ಹೈಕಮಾಂಡ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿತ್ತು ಎಂದರು.

ADVERTISEMENT

ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ನಾವೆಲ್ಲರೂ ಅಂದುಕೊಂಡಿದ್ದೆವು. ಅವರ ಅಗಲಿಕೆ ತುಂಬಾ ನೋವು ತಂದಿದೆ. ಪ್ರಸ್ತುತ ಕಲುಷಿತವಾದ ವಾತಾವರಣ ಇರುವಂತಹ ಸಂದರ್ಭದಲ್ಲಿ ಇಂತಹ ವ್ಯಕ್ತಿ ಸಿಗುವುದು ಬಹಳ ಅಪರೂಪ ಎಂದು ತಿಳಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ, ಮುಖಂಡರಾದ ಎಸ್.ಷಫಿ ಅಹ್ಮದ್‌, ರಫೀಕ್ ಅಹ್ಮದ್‌, ಕೆ.ಎಸ್. ಕಿರಣ್‍ಕುಮಾರ್, ಕೆಂಚಮಾರಯ್ಯ, ಮುರಳೀಧರ ಹಾಲಪ್ಪ, ನಾರಾಯಣಮೂರ್ತಿ, ವಾಲೇಚಂದ್ರು, ಅತೀಕ್ ಅಹ್ಮದ್‌, ಇಕ್ಬಾಲ್ ಅಹ್ಮದ್‌, ರಾಯಸಂದ್ರ ರವಿಕುಮಾರ್, ಪುಟ್ಟರಾಜು, ಮಂಜುನಾಥ್, ಸಿದ್ದಲಿಂಗೇಗೌಡ, ನಟರಾಜು, ಸುಜಾತಾ, ಸಂಜೀವ್‍ಕುಮಾರ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.