ADVERTISEMENT

ಅರ್ಚಕರಿಗೆ ದಿನಸಿ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 2:29 IST
Last Updated 1 ಜೂನ್ 2021, 2:29 IST
ತುಮಕೂರಿನಲ್ಲಿ ಸ್ವಾಮಿ ವೀರೇಶಾನಂದ ಸರಸ್ವತೀ ಅವರು ಅರ್ಚಕರಿಗೆ ದಿನಸಿ ಕಿಟ್ ವಿತರಿಸಿದರು
ತುಮಕೂರಿನಲ್ಲಿ ಸ್ವಾಮಿ ವೀರೇಶಾನಂದ ಸರಸ್ವತೀ ಅವರು ಅರ್ಚಕರಿಗೆ ದಿನಸಿ ಕಿಟ್ ವಿತರಿಸಿದರು   

ತುಮಕೂರು: ನಗರದ ರಾಮಕೃಷ್ಣ– ವಿವೇಕಾನಂದ ಆಶ್ರಮದಿಂದ ಅರ್ಚಕರ ಹತ್ತು ಕುಟುಂಬಗಳಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಧ್ರುವ ಫೌಂಡೇಶನ್ ಮತ್ತು ಅಮೆರಿಕದ ಕನ್ನಡ ಮಿತ್ರರ ಸಹಕಾರದೊಂದಿಗೆ ವಿತರಣೆ ಮಾಡಲಾಯಿತು.

ಆಶ್ರಮದ ಮುಖ್ಯಸ್ಥರಾದ ಸ್ವಾಮಿ ವೀರೇಶಾನಂದ ಸರಸ್ವತೀ ಮಾತನಾಡಿ, ‘ಮನುಷ್ಯರಿಗೆ ಸಂಕಷ್ಟ ಎದುರಾದಾಗ ಧೈರ್ಯ ಕಳೆದುಕೊಳ್ಳಬಾರದು. ಬೆಂಕಿಯನ್ನು ಕೆಳಮುಖವಾಗಿಸಿದರೂ ಅದರ ಜ್ವಾಲೆ ಮೇಲ್ಮುಖವಾಗುವಂತೆ, ಎಷ್ಟೇ ಸಂಕಷ್ಟಗಳು ಬಂದರೂ ಧೈರ್ಯದಿಂದ ಎದುರಿಸಬೇಕು’ ಎಂದು ಸಲಹೆ ನೀಡಿದರು.

‘ಮಾನವನು ಧರ್ಮಾವಲಂಬಿ ಯಾದಾಗ ಬದುಕಿನಲ್ಲಿ ಭರವಸೆಗಳು ಕ್ಷೀಣಿಸುವುದಿಲ್ಲ. ಬಡತನ, ಸಂಕಷ್ಟಗಳಿಗೆ ಅಂತಃಸತ್ವವು ಬಲಿಯಾಗಲು ಅನುವು ಮಾಡಿಕೊಡುವುದಿಲ್ಲ. ಧರ್ಮವು ಸೇವಾ ತತ್ವಕ್ಕೆ ಪ್ರೇರಣೆ ನೀಡುತ್ತದೆ. ಸೇವೆಯು ಸಾಮಾಜಿಕ ಕರ್ತವ್ಯ ಹಾಗೂ ಮಾನವೀಯತೆಯ ಅಭಿವ್ಯಕ್ತತೆಯೂ ಆಗಿರುತ್ತದೆ. ಅಂತಿಮವಾಗಿಮಾನವರಲ್ಲಿ ಅಂತರ್ಗತವಾಗಿರುವ ದೈವವನ್ನು ಆರಾಧಿಸುವ ಶ್ರೇಷ್ಠ ವಿಧಾನವಾಗುತ್ತದೆ. ಆದ್ದರಿಂದಲೇ ಸೇವೆಗೆ ಸಮಗ್ರ ಜೀವನದ ದೃಷ್ಟಿಕೋನವಿರಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸ್ವಾಮಿ ಪ್ರಣವಾನಂದಜೀ, ಸ್ವಾಮಿ ಧೀರಾನಂದಜೀ, ಸ್ವಾಮಿ ಪರಮಾನಂದಜೀ, ಸುಬ್ರಹ್ಮಣ್ಯ ಶಾಸ್ತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.