ADVERTISEMENT

ಕೋಡಿಬಿದ್ದ ದೊಡ್ಡಮಾಲೂರು ಕೆರೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 6:41 IST
Last Updated 22 ಅಕ್ಟೋಬರ್ 2024, 6:41 IST
<div class="paragraphs"><p>ಕೊಡಿಗೇನಹಳ್ಳಿ ಹೋಬಳಿಯ ದೊಡ್ಡಮಾಲೂರು ಕೆರೆ ಕೋಡಿ ಬಿದ್ದಿರುವುದನ್ನು ನೋಡಿ ಜನರು ಆನಂದಿಸಿದರು </p></div>

ಕೊಡಿಗೇನಹಳ್ಳಿ ಹೋಬಳಿಯ ದೊಡ್ಡಮಾಲೂರು ಕೆರೆ ಕೋಡಿ ಬಿದ್ದಿರುವುದನ್ನು ನೋಡಿ ಜನರು ಆನಂದಿಸಿದರು

   

ಕೊಡಿಗೇನಹಳ್ಳಿ: ಹೋಬಳಿಯಲ್ಲಿನ ಅತ್ಯಂತ ದೊಡ್ಡ ಕೆರೆ ಜೊತೆಗೆ ರಸ್ತೆ ಏರಿ ಮೇಲೆ ಸಂಚರಿಸುವ ಪ್ರಯಾಣಿಕರನ್ನು ಆಕರ್ಷಿಸುವ ದೊಡ್ಡಮಾಲೂರು ಕೆರೆ ಸೋಮವಾರ ಕೋಡಿ ಬಿದ್ದಿದೆ. ಜನರು ತಂಡೋಪ ತಂಡವಾಗಿ ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ.

2021-22ರಲ್ಲಿ ಕೋಡಿ ಬಿದ್ದಿದ್ದ ಕೆರೆ ಮತ್ತೊಮ್ಮೆ ಈ ಬಾರಿ ಕೋಡಿ ಬಿದ್ದಿರುವುದಕ್ಕೆ ಜನರು ಖುಷಿಪಟ್ಟರು. ಕೋಡಿ ಬಿದ್ದಿರುವ ನೀರನ್ನು ನೋಡಲು ದೊಡ್ಡಮಾಲೂರು ಗ್ರಾಮಸ್ಥರಲ್ಲದೇ, ಕೊಡಿಗೇನಹಳ್ಳಿ ಹೋಬಳಿಯ ಹಲವು ಗ್ರಾಮಗಳಿಂದ ಜನರು ಕುಟುಂಬ ಸಮೇತರಾಗಿ ಬಂದಿದ್ದರು. ಮಹಿಳೆಯರು ಮತ್ತು ಮಕ್ಕಳು ನೀರಲ್ಲಿ ನಿಂತು ಕುಣಿದು ಕುಪ್ಪಳಿಸಿದರೆ, ಯುವಕರು ಸೆಲ್ಪಿ ತೆಗೆದುಕೊಂಡು ಆನಂದಿಸಿದರು.

ADVERTISEMENT

ಕಳೆದ 20 ದಿನಗಳಿಂದ ಜಯಮಂಗಲಿ ನದಿ ಮೂಲಕ ಕೆರೆಗೆ ನೀರು ಬಂದಿರುವ ಕಾರಣ ಕೆರೆ ತುಂಬಲು ಸಹಕಾರಿಯಾಗಿದೆ. ಈ ಕೆರೆ ಕೋಡಿ ನೀರಿನಿಂದ ಕೆರೆ ಕೆಳಗಿರುವ ಸುಮಾರು ಹಲವು ಎಕರೆ ಪ್ರದೇಶದಲ್ಲಿನ ಬೆಳೆ ನೀರಲ್ಲಿ ಮುಳಗಲಿದೆ. ಒಂದಷ್ಟು ರೈತರಿಗೆ ನಷ್ಟವಾಗಲಿದೆ ಎಂದು ಕೆಲ ರೈತರು ನೋವು ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.