ADVERTISEMENT

ಚರಂಡಿಯಲ್ಲಿ ಕುಡಿಯುವ ನೀರು ಪೈಪ್‌ಲೈನ್‌: ಬುಕ್ಕಾಪಟ್ಟಣ ಗ್ರಾಮಸ್ಥರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 5:49 IST
Last Updated 10 ಅಕ್ಟೋಬರ್ 2024, 5:49 IST
ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ 5ನೇ ಬ್ಲಾಕ್ ನಲ್ಲಿ ಚರಂಡಿಯಲ್ಲಿ ಕುಡಿಯುವ ನೀರಿನ ಪೈಫ್ ಗಳನ್ನು ಆಳವಡಿಸಿರುವುದು.
ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ 5ನೇ ಬ್ಲಾಕ್ ನಲ್ಲಿ ಚರಂಡಿಯಲ್ಲಿ ಕುಡಿಯುವ ನೀರಿನ ಪೈಫ್ ಗಳನ್ನು ಆಳವಡಿಸಿರುವುದು.   

ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ 5ನೇ ಬ್ಲಾಕ್‌ನಲ್ಲಿ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌ ಆಳವಡಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬುಕ್ಕಾಪಟ್ಟಣ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ. ಇದರಿಂದಾಗಿ ಕೆಲವು ಮಂದಿ ಗ್ರಾಮ ಪಂಚಾಯಿತಿಯಿಂದ ಪೂರೈಕೆಯಾಗುವ ನೀರನ್ನು ಕುಡಿಯಲು ಬಳಸುತ್ತಿದ್ದಾರೆ‌. ಚರಂಡಿಯಲ್ಲಿ ಪೈಪ್‌ಗಳನ್ನು ಹಾಕಿ ನೀರು ಪೂರೈಕೆ ಮಾಡುತ್ತಿದ್ದು, ಈ ನೀರು ದುರ್ವಾಸನೆಯಿಂದ ಕೂಡಿದೆ. ಜನರು ಈ ನೀರನ್ನೇ ಕುಡಿಯುತ್ತಿದ್ದು, ಅವರ ಆರೋಗ್ಯ ಕೆಟ್ಟರೆ ಯಾರು ಹೊಣೆಯಾಗುತ್ತಾರೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಚರಂಡಿಯಲ್ಲಿ ಪೈಪ್‌ಲೈನ್ ಮಾಡಿದ್ದು ಒಂದು ವೇಳೆ ಪೈಪ್‌ಗಳು ಒಡೆದು ಅದರಲ್ಲಿ ಚರಂಡಿ ನೀರು ಮಿಶ್ರಣವಾದರೆ ಜನರ ಆರೋಗ್ಯದ ಗತಿ ಏನು? ಈ ಬಗ್ಗೆ ಪಂಚಾಯಿತಿ ನಿರ್ಲಕ್ಷ್ಯವಹಿಸಿದೆ ಎಂದು ದೂರಿದ್ದಾರೆ.

ADVERTISEMENT

ಜನರ ಆರೋಗ್ಯ ಕಾಪಾಡಬೇಕಿರುವ ಗ್ರಾಮ ಪಂಚಾಯಿತಿ ಶುದ್ಧ ಕುಡಿಯುವ ನೀರು ನೀಡಲು ವಿಫಲವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಒ ಮತ್ತು ವಾಟರ್‌ಮನ್‌ಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಧಿಕಾರಗಳು ಎಚ್ಚೆತ್ತು ಚರಂಡಿಯಲ್ಲಿ ಹಾಕಿರುವ ಪೈಪ್‌ಲೈನ್‌ಗಳನ್ನು ಬೇರೆಡೆ ಸ್ಥಳಾಂತರಿಸಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.