ತುಮಕೂರು: ಗ್ರಾಮೀಣ ಭಾಗದ ಜನರಿಗೆ ಇ-ಆಡಳಿತ ಪರಿಣಾಮಕಾರಿಯಾಗಿ ತಲುಪಿದರೆ ಮಧ್ಯವರ್ತಿಗಳಿಂದ, ಜನರ ಕೆಲಸ ನಿರ್ಲಕ್ಷ್ಯಿಸುವ ಅಧಿಕಾರಿಗಳಿಂದ ಮುಕ್ತಿ ಸಿಗುತ್ತದೆ ಎಂದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ.ಆರ್.ಎಸ್.ದೇಶಪಾಂಡೆ ತಿಳಿಸಿದರು.
ವಿ.ವಿಯಲ್ಲಿ ಶುಕ್ರವಾರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಆಯೋಜಿಸಿದ್ದ ‘ಇ-ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿಯ ಸಮಸ್ಯೆ ಹಾಗೂ ಸವಾಲುಗಳು’ ಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಪ್ರಜೆಗಳಿಗಾಗಿ ದುಡಿಯಬೇಕಾದ ಆಡಳಿತವೇ ಜನರಿಂದ ಕಿತ್ತು ತಿನ್ನುವ ವ್ಯವಸ್ಥೆಯಾಗಿ ಬದಲಾಗಿದೆ. 11 ಬಾರಿ ಬಜೆಟ್ ಮಂಡಿಸಿದ ಕೇಂದ್ರದ ಹಣಕಾಸು ಸಚಿವರಾಗಿದ್ದವರು ಇ-ಆಡಳಿತದ ಕನಸು ಕಂಡಿರಲಿಲ್ಲ ಎಂದು ವಿಷಾದಿಸಿದರು.
‘ಭಾರತದಲ್ಲಿ ಇ-ಆಡಳಿತದ ಆಯಾಮ–ಗ್ರಾಮೀಣ ದೃಷ್ಟಿಕೋನ’ ಕುರಿತ ಪುಸ್ತಕ ಬಿಡುಗಡೆ ಮಾಡಲಾಯಿತು. ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಎನ್.ಟಿ.ನೀಲಕಂಠ, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಜಯಶೀಲ, ಪ್ರಾಧ್ಯಾಪಕರಾದ ಬಿ.ರವೀಂದ್ರ ಕುಮಾರ್, ಪ್ರೊ.ವಿಲಾಸ್ ಎಂ.ಕದ್ರೋಳ್ಕರ್, ಸಹಾಯಕ ಪ್ರಾಧ್ಯಾಪಕ ಎಂ.ಮುನಿರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.