ADVERTISEMENT

ಎಡೆಯೂರು; ಕಣ್ಮನ ಸೆಳೆಯುವ ದೇವಾಲಯದ ನವೀಕೃತ ಪ್ರಾಂಗಣ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 14:52 IST
Last Updated 17 ಅಕ್ಟೋಬರ್ 2019, 14:52 IST
ನವೀಕೃತ ಪ್ರಾಂಗಣವನ್ನು ದೇವಾಲಯದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಿ.ಎಲ್.ಶಿವಕುಮಾರ್ ಗುರುವಾರ ವೀಕ್ಷಿಸಿದರು
ನವೀಕೃತ ಪ್ರಾಂಗಣವನ್ನು ದೇವಾಲಯದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಿ.ಎಲ್.ಶಿವಕುಮಾರ್ ಗುರುವಾರ ವೀಕ್ಷಿಸಿದರು   

ತುಮಕೂರು: ಹೈಕೋರ್ಟ್ ಆದೇಶ ಮತ್ತು ಪುರಾತತ್ವ ಇಲಾಖೆ ತಜ್ಞರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಕುಣಿಗಲ್ ತಾಲ್ಲೂಕಿನ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯದ ಪ್ರಾಂಗಣವನ್ನು ಮೂಲಸ್ವರೂಪ ಉಳಿಸಿಕೊಂಡು ₹ 10 ಕೋಟಿ ಮೊತ್ತದಲ್ಲಿ ನವೀಕರಣ ಮಾಡಲಾಗಿದೆ.

ಇದರಿಂದ ದೇವಾಲಯದ ಆವರಣದ ಭಕ್ತರ ಕಣ್ಮನ ಸೆಳೆಯುತ್ತಿದೆ. ದೇವಾಲಯದ ಪ್ರವೇಶ ಪ್ರಾಂಗಣ, ರುದ್ರಾಭಿಷೇಕ ಮಂಟಪ ಇರುವ ನಡು ಪ್ರಾಂಗಣ ಮತ್ತು ಪ್ರದಕ್ಷಿಣೆ ಪ್ರಾಂಗಣವನ್ನು ನವೀಕರಿಸಲಾಗಿದೆ.

ಪ್ರಾಂಗಣದಲ್ಲಿ ರೂಪಿಸಿದ ಸಿದ್ಧಲಿಂಗೇಶ್ವರ ಸ್ವಾಮಿಯ ಪವಾಡ ದೃಶ್ಯಗಳು ಭಕ್ತರಿಗೆ ಸಿದ್ಧಲಿಂಗೇಶ್ವರ ಮಹಿಮೆ, ಪವಾಡಗಳ ಬಗ್ಗೆ ಗಮನ ಸೆಳೆಯುತ್ತಿವೆ.

ADVERTISEMENT

’ಕ್ಷೇತ್ರದ ಅಭಿವೃದ್ಧಿಗೆ ₹ 40 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲಾಗಿತ್ತು. ದೇವಾಲಯದ ನಡು ಪ್ರಾಂಗಣ, ಪ್ರದಕ್ಷಿಣೆ ಪ್ರಾಂಗಣ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವಷ್ಟರಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಬಳಿಕ ಪುರಾತತ್ವ ಇಲಾಖೆಯ ತಜ್ಞರ ಮಾರ್ಗದರ್ಶನದಲ್ಲಿ ದೇವಾಲಯದ ಪ್ರಾಂಗಣದ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ನವೀಕರಣ ಮಾಡಬೇಕು ಎಂದು ಆದೇಶಿಸಿತ್ತು. ಆ ಪ್ರಕಾರ ನವೀಕರಣ ಮಾಡಲಾಗಿದೆ’ ಎಂದು ದೇವಾಲಯದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಿ.ಎಲ್.ಶಿವಕುಮಾರ್ ’ಪ್ರಜಾವಾಣಿ’ಗೆ ತಿಳಿಸಿದರು.

₹ 10 ಕೋಟಿ ಮೊತ್ತದ ಈ ನವೀಕರಣ ಕಾಮಗಾರಿಯನ್ನು ಶುಕ್ರವಾರ (ಅ.18) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.