ತುಮಕೂರು: ಕೋಳಿ ಮಾಂಸದ ಬೆಲೆ ಏರಿಕೆ ಮುಂದುವರಿದಿದ್ದು, ಈ ವಾರವೂ ₹220ಕ್ಕೆ ಮಾರಾಟವಾಗುತ್ತಿದೆ. ಮೊಟ್ಟೆಯ ಬೆಲೆಯೂ ಹೆಚ್ಚಾಗಿದ್ದು, ಒಂದು ಮೊಟ್ಟೆ ₹5.50ಕ್ಕೆ ಏರಿಕೆ ಯಾಗಿದೆ.
ಮಾಂಸದ ಬೆಲೆಯೂ ಹೆಚ್ಚಾಗಿದೆ. ಎಳೆಯ ಮಟನ್ ಕೆ.ಜಿ ₹750, ಸಾಧಾರಣ ಮಟನ್ ಕೆ.ಜಿ ₹650 ಇದೆ. ಸಧ್ಯದ ಪರಿಸ್ಥಿತಿಯಲ್ಲಿ ಕೋಳಿ, ಮಟನ್ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಹಾಪ್‌ಕಾಮ್ಸ್ ಹಣ್ಣಿನ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಸೀಬೆಹಣ್ಣು ಕೆ.ಜಿ ₹50, ಸೇಬು ₹100– 120ಕ್ಕೆ ಮಾರಾಟವಾಗುತ್ತಿದೆ. ಏಲಕ್ಕಿ ಬಾಳೆ ಹಣ್ಣು ಕೆ.ಜಿ ₹60ರಿಂದ ₹65ಕ್ಕೆ ಇದೆ. ಸಪೋಟಾ ₹100, ಕಿತ್ತಳೆ ₹100ಕ್ಕೆ ಮಾರಾಟವಾಗುತ್ತಿದೆ. ಆಯುಧ ಪೂಜೆಯವರೆಗೆ ಬಾಳೆಹಣ್ಣಿನ ಬೆಲೆ ಒಂದೇ ರೀತಿ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಹಾಪ್‌ಕಾಮ್ಸ್
ಮಳಿಗೆಯ ಟಿ.ಆರ್.
ನಾಗರಾಜು.
ಬೇಳೆ ಕಾಳು ಸ್ಥಿರ: ನಗರದ ಮಂಡಿಪೇಟೆಯಲ್ಲಿ ಬೇಳೆ ಕಾಳುಗಳ ಬೆಲೆ ಸ್ಥಿರವಾಗಿದೆ. ಕಳೆದ ಕೆಲವು ವಾರಗಳಿಂದ ದಿನಸಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ.
ಹೆಚ್ಚಾದ ಮೀನು ಬೆಲೆ: ನಗರದ ಮತ್ಯ್ಸದರ್ಶಿನಿಯಲ್ಲಿ ಶುಕ್ರವಾರಬಂಗುಡೆ ಕೆ.ಜಿಗೆ ₹220ಕ್ಕೆ ಮಾರಾಟವಾಗುತ್ತಿತ್ತು. ಶನಿವಾರ ₹110 ಹೆಚ್ಚಾಗಿ ಕೆ.ಜಿಗೆ ₹330ರಂತೆ ಮಾರಾಟವಾಯಿತು. ಬೂತಾಯಿ ₹200, ಅಂಜಲ್ ₹730, ಏಡಿ ₹320ಕ್ಕೆ ಹಾಗೂ ಕಪ್ಪು ಮಾಂಜಿಕೆ.ಜಿಗೆ ₹530ರಂತೆ ಮಾರಾಟವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.