ADVERTISEMENT

ತುಮಕೂರು | ಏಳು ಕೊಳವೆ ಬಾವಿ ಕೊರೆಸಿದರೂ ನೀರಿಲ್ಲ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಮೇ 2024, 23:37 IST
Last Updated 6 ಮೇ 2024, 23:37 IST
ರಾಜಣ್ಣ
ರಾಜಣ್ಣ   

ತೋವಿನಕೆರೆ (ತುಮಕೂರು): ಕೊಳವೆ ಬಾವಿ ಕೊರೆಸಲು ಲಕ್ಷಾಂತರ ರೂಪಾಯಿ ಕೈ ಸಾಲ ಮಾಡಿದ್ದ ರಾಜಣ್ಣ (38) ಎಂಬ ರೈತ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೋವಿನಕೆರೆ ಪಂಚಾಯಿತಿ ವ್ಯಾಪ್ತಿಯ ಚಿಕ್ಕಣ್ಣನಹಳ್ಳಿ ಜಮೀನಿನಲ್ಲಿ ತೋಟದಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.

ಆರು ವರ್ಷದಲ್ಲಿ ಏಳು ಕೊಳವೆ ಬಾವಿ ಕೊರೆಸಿದ್ದರು. ಹತ್ತು ದಿನಗಳ ಅಂತರದಲ್ಲಿ ಎರಡು ಕೊಳವೆ ಬಾವಿ ಕೊರೆಸಿದ್ದು, ತೀರಾ ಕಡಿಮೆ ನೀರು ಬಂದಿದೆ. 

ADVERTISEMENT

ಮೂರು ದಿನಗಳಿಂದ ಸಾಲ ನೀಡಿದ್ದ ವ್ಯಕ್ತಿಗಳು ಹಣ ಹಿಂದಿರುಗಿಸುವಂತೆ ಮನೆಗೆ ಬಂದು ಒತ್ತಡ ಹೇರಿದ್ದರು. ಕಂದಾಯ ಇಲಾಖೆಯ ರಶ್ಮಿ ಮಧು ಭೇಟಿ ನೀಡಿದ್ದರು. ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

ನೀರು ಇಲ್ಲದೆ ಒಣಗಿರುವ ಅಡಿಕೆ ತೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.