ADVERTISEMENT

ಚನ್ನತಿಮ್ಮಯ್ಯನಪಾಳ್ಯದ 30 ಎಕರೆ ಬೆಳೆ ಆರೋಪ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 8:13 IST
Last Updated 17 ನವೆಂಬರ್ 2024, 8:13 IST
ಕುಣಿಗಲ್ ತಾಲ್ಲೂಕು ಚನ್ನತಿಮ್ಮಯ್ಯನಪಾಳ್ಯ ರೈತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರೇಷ್ಮಾ ಅವರಿಗೆ ಮನವಿಪತ್ರ ಸಲ್ಲಿಸಿದರು
ಕುಣಿಗಲ್ ತಾಲ್ಲೂಕು ಚನ್ನತಿಮ್ಮಯ್ಯನಪಾಳ್ಯ ರೈತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರೇಷ್ಮಾ ಅವರಿಗೆ ಮನವಿಪತ್ರ ಸಲ್ಲಿಸಿದರು   

ಕುಣಿಗಲ್: ತಾಲ್ಲೂಕಿನ ಬೇಗೂರು ಕೆರೆ ತುಂಬಿಸುವ ನೆಪದಲ್ಲಿ ಚನ್ನತಿಮ್ಮಯ್ಯನಪಾಳ್ಯದ 30 ಎಕರೆ ಬೆಳೆ ನಾಶವಾಗುತ್ತಿದ್ದು, ಅಧಿಕಾರಿಗಳು ಗಮನಹರಿಸಿಲ್ಲ ಎಂದು ಆರೋಪಿಸಿ ತಾಲ್ಲೂಕು ಕಚೇರಿ ಮುಂದೆ ಶನಿವಾರ ರೈತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರೇಷ್ಮಾ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಹೊನ್ನಪ್ಪ, ತಾಲ್ಲೂಕಿನಲ್ಲಿ ಹೇಮಾವತಿ ನಾಲಾ ವಲಯದಲ್ಲಿ ನೀರು ಹರಿಯುತ್ತಿದ್ದು, ಬೇಗೂರು ಕೆರೆ ತುಂಬಿಸಲು ಹರಿಸುತ್ತಿರುವ ನೀರು ಚನ್ನತಿಮ್ಮಯ್ಯನಪಾಳ್ಯ ವ್ಯಾಪ್ತಿಯ ರೈತರ ಜಮೀನಿಗೆ ಹರಿಯುತ್ತಿದ್ದು, 30 ಎಕರೆ ಪ್ರದೇಶದಲ್ಲಿ ನೀರು ತುಂಬಿದ್ದು,  ಬೆಳೆಗಳು ನಾಶವಾಗುವ ಹಂತಕ್ಕೆ ತಲುಪಿದೆ. ಕೆಲ ಸಮಯದವರೆಗೂ ನೀರು ಹರಿಸದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಗಮನಹರಿಸದ ಕಾರಣ ಬೆಳೆ ನಾಶವಾಗುತ್ತಿದೆ. ಹೇಮಾವತಿ ನಾಲಾ ವಲಯದ ಎಂಜಿನಿಯರ್ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದರೂ, ಪ್ರಯೋಜನವಾಗಿಲ್ಲ ಎಂದರು.

ಕೆಆರ್‌ಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಯ್ಯ, ಮಂಜುನಾಥ್, ರಮೇಶ್, ಚಲುವಯ್ಯ, ತ್ಯಾಗರಾಜು, ರಾಜಣ್ಣ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.